ದೇವ ಹನುಮಶೆಟ್ಟ | ರಾಯ ಜಗಜಟ್ಟಿ
ಕಾವೋದು ಭಾವಿ ಪರಮೇಷ್ಟಿ ಪ
ಪಾವನಚರಿತ ಸಂಜೀವನ ಗಿರಿಧರ
ಪಾವಮಾನಿ ಕರುಣಾವಲೋಕನದಿ
ನೀ ನಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ
ವಾನರ ಕುಲನಾಯಕ | ಜಾನಕಿಶೋಕ ನಿವಾರಕ
ಕಾನನ ತೃಣಪಾವಕ | ಹೀನ ಕೌರÀವ ನಾಶಕ |
ಸನ್ಮಾನಿ ತಿಲಕ ಆನಂದತೀರ್ಥನಾಮಕ |
ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ
ಸ್ಥಾಣು ಜನಕ ಗೀರ್ವಾಣ ವಿನುತ ಜಗತ್ಪ್ರಾಣ
ಕಲ್ಯಾಣ ಮೂರುತಿ 1
ಮರುತನಂದನ ಹನುಮ | ಪುರಹರರೋಮ
ಪರಮಪುರುಷ ಶ್ರೀ ಭೀಮಾ
ಕರುಣಸಾಗರ ಜಿತಕಾಮ | ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ
ಜರಿಜ ವಿನಾಶಕ ||
ಹರಿಮತ ಸ್ಥಾಪಕ | ದುರಿತ ವಿಮೋಚಕ
ಶರಣು ಜನರ ಸುರತರು ಭಾರತಿವರ
ಮರಿಯದೆ ಪಾಲಿಸೊ ನಿರುತ ಮಮ ಚರಿತ 2
ಧಿಟ್ಟ ಶಾಮಸುಂದರ ವಿಠಲ ಕುವರ
ದುಷ್ಟರಾವಣ ಮದಹರ
ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ
ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ
ನಿನ್ನಪದ ಥಟ್ಟನೆ ಪಾಡುವ
ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ
ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ 3
No comments:
Post a Comment