Labels

Monday, 30 March 2020

ಒಲ್ಲೆನೆ ವೈದಿಕ ಗಂಡನ


ಒಲ್ಲೆನೆ ವೈದಿಕ ಗಂಡನ - ನಾ -
ನೆಲ್ಲಾದರೂ ನೀರ ಧುಮುಕುವೆನಮ್ಮ ಪ.
ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ |
ಕೆಟ್ಟ ಸೀರೆಯ ನಾನುಡಲಾರೆನೆ ||
ಹಿಟ್ಟ ತೊಳಸಿ ಎನ್ನ ರಟ್ಟೆಯಲ್ಲ ನೊಂದವು |
ಎಷ್ಟೆಂದು ಹೇಳಲಿ ಕಷ್ಟದ ಒಗತನ 1
ಕೃಷ್ಣಾಜಿನವನು ರಟ್ಟೆಯಲಿ ಹಾಕಿಕೊಂಡು ||
ಬೆಟ್ಟಲಿ ಗಿಂಡಿಯ ಹಿಡಿದಿಹನೆ ||
ದಿಟ್ಟತನದಿ ನಾನೆದುರಿಗೆ ಹೋದರೆ |
ದೃಷ್ಟಿಯಿಂದಲಿ ಎನ್ನ ನೋಡನಮ್ಮ 2
ನಿನ್ನಾಣೆ ಹುಸಿಯಲ್ಲ ಬಿನ್ನಣ ಮಾತಲ್ಲ |
ಕಣ್ಣಸನ್ನೆಯಂತು ಮೊದಲೆ ಇಲ್ಲ ||
ಮುನ್ನಿನ ಜನ್ಮದಲಿ ಪುರಂದರವಿಠಲನ |
ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ 3


No comments:

Post a Comment