Labels

Monday, 30 March 2020

ಕಾಳಿಯಮರ್ದನ ರಂಗಗೆ- ಹೇಳೆ


ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |
ಕೇಳಲೊಲ್ಲನು ಎನ್ನ ಮಾತನು ಪ
ದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |
ಬೆಟ್ಟಕೆ ಬೆನ್ನಾತು ನಿಂತನೆ ||
ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1
ಮೂರಡಿ ಭೂಮಿಯ ಬೇಡಿದನೆ-ನೃಪರ |
ಬೇರನಳಿಯೆ ಕೊಡಲಿ ಪಿಡಿದನೆ ||
ನಾರಮಡಿಯನುಟ್ಟು ಬಂದನೆ-ಅಹ |
ಚೋರತನದಿ ಪಾಲ್ಬೆಣ್ಣೆಯ ತಿಂದನೆ 2
ಬತ್ತಲೆ ನಾರಿಯರನಪ್ಪಿದ-ಹೋಗಿ ||
ಉತ್ತಮಾಶ್ವವನು ಹತ್ತಿದ ||
ಹತ್ತವತಾರವ ತಾಳಿದ-ನಮ್ಮ |
ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3


No comments:

Post a Comment