ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟ
ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.
ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದು
ಉರುವ ಮಾರಿಗೆ ಗ್ರಾಸವಾಗಬಹುದು
ಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದು
ಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1
ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದು
ಹಸಿದ ಹುಲಿಬಾಯಿ ತುತ್ತಾಗಬಹುದು
ಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನು
ಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2
ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದು
ಒಡಲಾಸೆಗೊಲ್ಬುರಾಳಾಗಬಹುದು
ಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿ
ಬಡವನಾಗಿಯೇ ಬೇಡಿ ಉಣ್ಣಬಹುದು 3
No comments:
Post a Comment