Labels

Sunday, 29 March 2020

ಏನೆಂದರೇನು ನೀನೆನ್ನ ಕಾಯೊ-|


ಏನೆಂದರೇನು ನೀನೆನ್ನ ಕಾಯೊ-|
ನೀನೆ ನನಗೆಂದೆಂದು ತಂದೆ-ತಾಯೊ....................... ಪ
ಆಪತ್ತು ಕಾಲಕ್ಕೆ ಅನಂತ ನೀ ಕಾಯೊ |
ತಾಪಜ್ವರಕೆ ತ್ರಿವಿಕ್ರಮನೆ ಕಾಯೋ ||
ಭೂಪತಿಯು ಮುನಿದರೆ ಶ್ರೀಪತಿಯೆ ನೀ ಕಾಯೊ |
ವ್ಯಾಪಾರ ಧರ್ಮವನು ಯದುಪತಿಯೆ ನೀ ಕಾಯೊ.............. 1
ಸರುಪ ಸುತ್ತಿದರೆ ಸರ್ವೋತ್ತಮನೆ ನೀ ಕಾಯೊ |
ಪರಿಪರಿಯ ದೋಷಗಳ ಪದ್ಮನಾಭ ಕಾಯೊ ||
ಹರಕು ಸಂಸಾರವನು ಹರಿ ಬಂದು ನೀ ಕಾಯೊ |
ದೊರಕದೀ ವೇಳೆಯಲಿ ದೊರೆ ನೀನೆ ಕಾಯೊ....................... 2
ನರರು ಮುನಿದಿರಲು ನಾರಾಯಣನೆ ನೀ ಕಾಯೊ |
ಪುರ ಬೆನ್ನುಗೊಳಲು ಪುರುಷೋತ್ತಮನೆ ನೀ ಕಾಯೊ |
ಅರಿಯು ಅಡ್ಡಾದರೆ ಅಚ್ಯುತನೆ ನೀ ಕಾಯೊ ||
ಕರಕರೆಯ ಸಂಸಾರ ಕೃಷ್ಣ ನೀ ಕಾಯೊ....................... 3
ಮದಮತ್ಸರವನು ಮಧುಸೂದನನೆ ನೀ ಕಾಯೊ |
ಮದಬಂದ ವೇಳೆಯಲಿ ಮಾಧವನೆ ಕಾಯೊ ||
ಹೃದಯದಾ ಕಪಟವ ಹೃಷಿಕೇಶ ನೀ ಕಾಯೊ |
ಒದಗಿದ ಕಲ್ಮಷವ ವಾಸದೇವ ಕಾಯೊ....................... 4
ಕಾರ್ಪಣ್ಯ ದೋಷವ ಸರ್ಪಶಯನನೆ ಕಾಯೊ |
ಒಪ್ಪುವ ಪ್ರಕಾಶವ ಕೇಶವನೆ ಕಾಯೊ |
ಅಪ್ಪ ತಿರುಮಲರಾಯ ಪುರಂದರವಿಠಲನೆ |
ಒಪ್ಪಿ ಅನವರತ ನಿಶ್ಚಿಂತೆಯನು ಕಾಯೊ....................... * 5


No comments:

Post a Comment