ಏಳಲವ ಮಾಡಿದಿರಿ ಏನ ಕೊಟ್ಟರು ಬೇಡ
ಕಾಲ ಮನುಜರ ಸಂಗ ಸಾವಿರ ಕೊಟ್ಟರು ಬೇಡ ಪ.
ಆದಿ ತಪ್ಪುವನವನ ಆಶೆಮಾಡಲು ಬೇಡ
ಕೂಡಿ ನಡಿಯುವಲ್ಲಿ ಕಪಟ ಬೇಡ
ಮೂಢ ಹೆಣ್ಣಿನ ಸಂಘ ಮಮತೆ ಇದ್ದರೂ ಬೇಡ
ಮಾಡಿದಪುಕಾರವನ್ನು ಮರೆಯಬೇಡ1
ಬಂಧುವರ್ಗದಿ ಬಲು ನಿಂದು ವಾದಿಸಬೇಡ
ಮಂದಮತಿಯ ಕೂಡಾ ಮಾತು ಬೇಡ
ಬರದ ತಿಥಿಗಳಲಿ ಬರಿದೆ ಕೋಪಿಸಬೇಡ
ಇಂದಿರೇಶನ ಮರೆದು ಜಡವಾಗಬೇಡ 2
ಹವಣರಿಯದೆ ಹಗೆಗಳ ಹತ್ತಿರಗೆಯಬೇಡ
ಜವನ ಭೂಮಿಯಲಿದ್ದು ಜೊತೆ ಬೇಡ
ಭುವನೀಶ ಪುರಂದರವಿಠಲನ ನೆನೆಯದೆ
ಅವಮತಿಯಾಗಿ ನೀ ಕೆಡಲುಬೇಡ 3
No comments:
Post a Comment