ಕೊಬ್ಬಿನಲಿರಬೇಡವೊ - ಏ ನಮ್ಮ ನನುಜಾ
ಕೊಬ್ಬಿನಲಿರಬೇಡವೊ ಪ.
ಸಿರಿಬಂದ ಕಾಲಕೆ ಸಿರಿಮದವೆಂಬರು
ಬಿರಿದು ಬಿರಿದು ಮೇಲಕೆ ಮಾಳ್ಪರು
ಸಿರಿಹೋದ ಮರುರಿನ ಬಡತನ ಬಂದರೆ
ಹುರುಕು - ಕಜ್ಜಿಯ ತುರಿಸಿ ತಿರುಗುವರಯ್ಯಾ 1
ಒಡವೆ ವಸ್ತುವನಿಟ್ಟು ಬಡಿವಾರ ಮಾಳ್ಪರು
ನಡೆಯಲಾರನೆಂದು ಬಳುಕುವರು
ಸಿಡಿಲು ಎರಗಿದಂತೆ ಬಡತನ ಬಂದರೆ
ಕೊಡವ ಹೊತ್ತನಾರ ತರುವರಯ್ಯ 2
ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರು
ಶಾಪಿಸಿಕೊಂಡರು ಬಡವರ ಕೈಲಿ
ಶ್ರೀಪತಿ ಪುರಂದರವಿಠಲರು ಮುನಿದರೆ
ಭೊಪಾರದೊಳಗೆಲ್ಲ ತಿರಿದು ತಿಂಬರಯ್ಯ 3
No comments:
Post a Comment