Labels

Monday, 30 March 2020

ಒಳ್ಳೆಯದೊಳ್ಳೆಯದು


ಒಳ್ಳೆಯದೊಳ್ಳೆಯದು ಪಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ? ಅ.ಪಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ |ಉಡೆಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1
ಅರಿವು ಮರೆವು ಮಾಡಿ ತಿರುಗಿಸಿದೆಯಾ ಎನ್ನ |ಕೊರಳಿಗೆ ನಿನ್ನಯ ಚರಣ ಕಟ್ಟಿಕೊಂಬೆ 2
ಅತ್ತೆಯ ಮಕ್ಕಳಿಗೆ ತೆತ್ತಿಗ ನಿನಗಾಗಿ |ಎತ್ತದ ರಾಶಿ ತಂದಿತ್ತ ಪರಿಯಲಿ 3
ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ |ಚಿತ್ತದಲ್ಲಿ ಹೊತ್ತು ಕಟ್ಟಿಕೊಂಬೆನು 4
ಇರುಳು ಹಗಲು ಬಿಡೆದೆ ವರಪುರಂದರಗೊಲಿದೆ |ಅರಿದು ಏನು ಇಷ್ಟು ಪುರಂದರವಿಠಲನೆ 5


No comments:

Post a Comment