Labels

Sunday, 29 March 2020

ಏಕೆ ಮೈ ಮರೆದೆ ನೀನು - ಜೀವನವೇ


ಏಕೆ ಮೈ ಮರೆದೆ ನೀನು - ಜೀವನವೇ - |
ಏಕೆ ಮೈಮರೆದೆ ನೀನು ಪ
ಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|
ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.
ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |
ಎದ್ದು ಕುಳ್ಳಿರಬಾರದೆ - ಜೀವನವೇ ||
ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |
ಒದ್ದು ಬಿಸಾಡು ಕಣೊ - ಜೀವನವೇ 1
ಕಂದರ್ಪನೆಂಬವ ಕಾದುತ ಬರುವಾಗ |
ನಿಂದಿಸುತಿರಬಾರದೆ - ಜೀವನವೇ ||
ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |
ಕೊಂದು ಬೀಸಾಡು ಕಾಣೊ - ಜೀವನವೇ 2
ವಿಷಯದಿ ಸುಖಕಾಣೆ ಪಶುಜನರೊಳು ದೇಹ |
ಹಸನುಗಳೆಯಲು ಬೇಡವೋ - ಜೀವನವೇ||
ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|
ರಸದಿ ಲೋಲಾಡು ಕಾಣೋ - ಜೀವನವೇ 3


No comments:

Post a Comment