Labels

Sunday, 29 March 2020

ಏಕೆ ನಿರ್ದಯನಾದೆ ಎಲೋ ದೇವನೇ


ಏಕೆ ನಿರ್ದಯನಾದೆ ಎಲೋ ದೇವನೇ
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪ
ಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||
ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1
ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆ
ಗರುಡನ ಮೇಲೆ ಗಮನವಾಗದೆ ||
ಭರದಿಂದ ನೀ ಬಂದು ಕರಿಯನುದ್ದರಿಸಿದೆ
ಕರಿರಾಜನೇನು ಕೊಟ್ಟನು ಹೇಳು ಹರಿಯೇ 2
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗದ ಮೊಮ್ಮಗನೆ ||
ಭಜನೆಗೈವರೆ ಹಿತರೆ ನಾ ನಿನಗನ್ಯನೆ
ತ್ರಿಜಗಪತಿ ಸಲಹೆನ್ನ ಪುರಂದರ ವಿಠಲ 3


No comments:

Post a Comment