Labels

Monday, 30 March 2020

ಕೃಷ್ಣ ಮಂತ್ರವ ಜಪಿಸೊ - ಏ ಮನುಜ


ಕೃಷ್ಣ ಮಂತ್ರವ ಜಪಿಸೊ - ಏ ಮನುಜ |
ಕೃಷ್ಣ ಮಂತ್ರವ ಜಪಿಸೊ ಪ.
ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪ
ಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |
ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||
ಉಪದೇಶದಲಿ e್ಞÁನಕೊಟ್ಟು ಸಲಹುವ ಮಂತ್ರ |
ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1
ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |
ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||
ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |
ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2
ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |
ಜೀವಗಳಿಗೆಲ್ಲ ಸಂಜೀವ ಮಂತ್ರ ||
ಪಾವನ ಮಾಡಿ ಪಾಲಿಪುದೀ ಮಂತ್ರ |
ದೇವ ಪುರಂದರವಿಠಲ ಮಹಾ ಮಂತ್ರ 3


No comments:

Post a Comment