Labels

Thursday, 19 March 2020

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ nambide ninna paada guru mukhya prana

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||
ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |
ದಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ || ಆ. ಪ. ||
ಇಪ್ಪತ್ತು ಒಂದು ಸಾವಿರ ಐದೊಂದು ನೂರು | ಅಪ್ರತಿಮ ಹಂಸ ಮಂತರ |
ತಪ್ಪದೆ ದಿನ ದಿನ ಒಪ್ಪುವಂದದಿ  ಜಪಿಸಿ | ತಪ್ಪಿಸೋ ಭಾವವ ಸಮೀಪದ ಜೀವಕೆ |
ಅಪ್ಪನಂದಾಡಿ ಪುಣ್ಯ ಬಪ್ಪಂತೆ ಕರುಣಿಸೋ | ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ || 1 ||

ಹತ್ತೇಳು ಎರಡಾಯಿತು ನಾಡಿ ಯೊಳು | ಸುತ್ತಿ ಸುತ್ತುವ ಮಾರುತ |
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ  | ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ |
ತಟ್ಟುವರೊಳು ಜೀವೋತ್ತಮನೆ | ಸಮ ಚಿತ್ತ  ಎನಗೆ ಕೊಡುತ್ತರ ಲಾಲಿಸೊ || 2 ||

ಅಂತರಂಗದ ಉಸುರ ಹೊರಗೆ ಬಿಟ್ಟು | ಅಂತರಂಗಕ್ಕೆ ಸೇರುವ | ಪಂತದಾಳು ನೀನೇ ಕಂತು ಜನಕನಲ್ಲಿ |
ಮಂತ್ರೀಯೆನಿಸಿ ಸರ್ವಾಂತರ್ಯಾಮಿಯಾಗಿ | ನಿಂತು ನಾನಾ ಬಗೆ ತಂತು ನಡೆಸುವ | ಹಂತಕಾರಿ ಗುಣವಂತ ಬಲಾಢ್ಯ || 3 ||

ಪಂಚ ಪ್ರಾಣ ರೂಪನೆ ಸತ್ವ ಕಾಯ | ಪಂಚೇಂದ್ರಿಯಗಳಪ್ಪನೆ | ಮುಂಚಿನ  ಪರಮೇಷ್ಠಿ ಸಂಸಚಿ ತಗಾಮ ಬಿಡಿಸಿ |
ಕೊಂಚ  ಮಾಡೋ ಪ್ರಾರಬ್ಧ ವಂಚ ನೆ ಗೈಸದೇ | ಅಂಚ ಅಂಚಿಗೆ ಪರಪಂಚಗೋಳೋಡಿಸಿ  | ಪಂಕ ವಕ್ತ್ರ ಹರಿ ಮಂಕಾದ ಗುರುವೆ || 4 ||

ಯೋಗಾಸನದೊಳಿಪ್ಪ ಯಂತ್ರೋದ್ಧಾರ  |ಭಾಗವತರಪ್ಪ | ಯೋಗಿಗಳಿಗೀಶ ವ್ಯಾಸಯೋಗಿಗೊಲಿದ ನ್ಯಾಸ | ಶ್ರೀತುಂಗಭದ್ರ ನಿವಾಸ | ಬಾಗುವೆ ಕೊಡು ಎನಗೆ ಶ್ರೀಗುರುವಿಜಯವಿಟ್ಟಲ  ಪಾದಕೆ | ಬಾಗಿದ ಭವದೂರ ಜಾಗರ ಮೂರುತಿ || 5 ||

2 comments:

  1. My favorite song.

    ReplyDelete
  2. Paragraph 4 it is hari Manchanda Guruve pls correct

    ReplyDelete