ಏನೇನ ಮಾಡಿದರೇನು ಫಲವಯ್ಯ
ಭಾನುಕೋಟಿ ತೇಜ ಶ್ರೀನಿವಾಸನ ಭಜಿಸದೆ ಪ.
ಹಲವು ಓದಿದರೇನು ಹಲವು ಕೇಳಿದರೇನು
ಜಲದೊಳ ಮುಳುಗಿ ಕುಳಿತಿದ್ದರೇನು
ಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನು
ಚೆಲುವ ದೇವನೊಳು ಎರತವಿಲ್ಲದಾತನ 1
ಅನ್ನ ಜರೆದು ಅರಣ್ಯ ಚರಿಸದರೇನು
ಉನ್ನತ ವ್ರತಗಳಾಚಾರಿಸಿದರೇನು
ಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನು
ಗಾನ ಲೋಲುನಲಿ ಎರಕವಿಲ್ಲದನಕ 2
ಬತ್ತಲೆ ತಿರುಗಿ ಅವಧೂತನೆನಿಸಿದರೇನು
ತತ್ವ ವಾಕ್ಯಂಗಳ ಪೇಳಿದರೇನು
ಚಿತ್ತಜನಯ್ಯ ಶ್ರೀ ಪುರಂದರವಿಠಲನ
ಚಿತ್ತದೊಳಿರಿಸಿ ಒಲಿಸಿಕೊಳ್ಳದನಕ 3
No comments:
Post a Comment