ಘಾತಕರಿನ್ನೇಕೆ ಪರಮಾರ್ಥ ಶ್ರವಣ ನೀತಿವಂತರೆ ನಿಮಗೆ ಪರನಿಂದೆ ಏಕೆ ? \\ಪ.\\
ಕೋತಿಗಂದಣವೇಕನಾಥನಿಗೆ ಮುನಿಸೇಕೆ ? ಹೋತು ಕಾಳಗವಾಡೆ ಖ್ಯಾತಿಯೇಕೆ ?
ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ? ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? \\1\\
ದಯವಂತನಲ್ಲದಾ ದೊರೆಯ ಸೇವೆಯು ಏಕೆ ? ಭಯವು ಉಳ್ಳವಗೆ ರಣರಂಗವೇಕೆ ?
ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆ ವ್ಯಯವಾದ ಧನಕಿನ್ನು ಚಿಂತೆಯೇಕೆ ? \\2\\
ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆ ಬಲ್ಲಧಿಕ e್ಞÁನಿಗೆ ದ್ವೇಷವೇಕೆ ?
ಚೆಲ್ವ ಶ್ರೀ ಪುರಂದರ ವಿಠಲನ ದಯವಿರಲು ಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? \\3\\
No comments:
Post a Comment