Labels

Saturday, 30 November 2019

ಶೇಷಶಯನ ನಿನ್ನ ಪರಮ sheshashayane ninna

ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಪ
ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನುಅ
ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು 1
ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು2
ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು3
ಅಂಕಕ್ಕೆ ರಥವ ನಡೆಸಿದವರೊಳು, ನಿ-ಶ್ಶಂಕೆ ಧರ್ಮವ ಗೆದ್ದ ಹಿರಿಯರೊಳುಲಂಕೆಯ ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು 4
ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿಊಟವ ಬಯಸಿದಂತೆ ನಾ ಬೇಡಿದೆನಾಟಕಧರ ನೆಲೆಯಾದಿಕೇಶವ, ನಿ-ನ್ನಾಟದೊಳಿರಿಸು ಕಂಡ್ಯ ಎನ್ನನು 5

ಶರಣು ಶರಣುಶರಣು sharanu sharanu dashrath

ಶರಣು ಶರಣುಶರಣು ದಶರಥ ರಾಮದೂತಗೆ ಪ
ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ
ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1
ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2
ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3

ವ್ಯರ್ಥವಾಯಿತಲ್ಲ ಜನ್ಮವು vyarthavayitalla janmavu

ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ಪ
ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿಮತ್ತನಾಗಿ ಬಲು ಕೃತ್ಯಗಳನು ಮಾಡಿಅ
ಹರಿಯ ನೆನಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲಪರಮ ಮೂಢರಲಿ ನಿರುತ ಸಂಗವ ಮಾಡಿಗುರು ಹಿರಿಯರ ದಯ ದೊರೆಯದೆ ಸುಮ್ಮನೆ1
ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನಶ್ವಾನಗಿಂತಲು ಬಲು ಮಾನಗೆಟ್ಟು ನಾದೀನನಾಗಿ ಮನೆಮನೆಗಳ ತಿರುಗಿ 2
ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲರಾಗುರಂಗು ಭಕ್ತಿ ಭಾವದೊಳುಬೀಗಿ ಚೆನ್ನಕೇಶವನನು ನೆನೆಯದೆ 3

ವಿಶ್ವಲೋಕೇಶ ವಿಶ್ವಲೋಕೇಶ visvalokesha Vishwalokesha

ವಿಶ್ವಲೋಕೇಶ ವಿಶ್ವಲೋಕೇಶ ವಿಮಲೈಕ ಮೂರ್ತಿವಿಶ್ವ ಉದ್ಧರ ವಿಶ್ವ e್ಞÁನರೂಪವಿಶ್ವದೊಳ ಹೊರಗು ನೀನಲ್ಲದೆ ಬೇರೆವಿಶ್ವನಾಟಕ ಸೂತ್ರಧಾರರುಂಟೆ ಹರಿಯೆ ಪ
ಮುಕುಟ ಮಂಡೆಯಲಿ ಧ್ರುವಲೋಕ ಭುವನಾವಳಿಯುನಿಖಿಲ ಶ್ರುತಿ ನವರತುನ ನಿಟಿಲದಲ್ಲಿಮುಖದಲಿಂದ್ರರು ಅಗ್ನಿ ಸಪ್ತ ಋಷಿಗಳು ದ್ವಿಜರುಮುಖದ್ವಾರದುಸುರಿನಲಿ ಶ್ರುತಿ ಮರುತರುದೃಕುಯುಗದಿ ರವಿ ಶಶಿಯು ಎವೆಯಲ್ಲಿ ನಕ್ಷತ್ರಪ್ರಕಟ ಜಿಹ್ವೆಯ ವಾಣಿ ಕರ್ಣದ್ವಯದಿವಿಕಟ ಕಿವಿಯಲಿ ಅಶ್ವಿನಿದೇವತೆಗಳೆಲ್ಲಸಕಲ ಧರ್ಮವ ಪಡೆದೆಯೆಲೊ ಹರಿಯೆ 1
ಸ್ಕಂಧದಲಿ ಅತಿಥಿಗಳು ವಿದ್ಯಾತತಿಗಳು ಮಹಾಚಂದದರಸುಗಳು ಭುಜ ತೋಳಿನಲ್ಲಿಮುಂದುರದಿ ವಿಷ್ಣು ಹರ ಬ್ರಹ್ಮ ಸಹಿತುದರದಲಿಹಿಂದಿನ ಮಗ್ಗುಲಲಿ ಮನುಮುನಿಗಳುಮುಂದಿನ ಮಗ್ಗುಲಲಿ ಗಿರಿನಿಚಯಂಗಳುಸಂಧಿಯಲಿ ಮಕರಂದ ದೇವತೆಗಳುಮುಂದೊರೆದಿಹ ರೋಮಕೂಪದಗ್ರದಳತೆಯುವೃಂದಗಳ ಶೋಭಿಪ ರೀತಿಯ ಪಡೆದೆಯೆಲೊ ಹರಿಯೆ2
ಬೆನ್ನಿನಲಿ ವಸುನಿಕರ ಸ್ಮರನು ಲಿಂಗದಲಿ ಈ ಭು-ವನವೆಲ್ಲವು ಚೆಲುವ ನಾಭಿಯಲ್ಲಿಮುನ್ನ ಕೈಯಲಿ ವಿಶ್ವದೇವತೆಗಳು ವೈಶ್ಯಉನ್ನತ ಜಾನುವಿನ ಸಕ್ತಿಯಲಿಭಿನ್ನ ನದಿಗಳು ಸನ್ಮೋಹನ ಶಕ್ತಿ ಪ್ರ-ಸನ್ನ ಪಾದಾಬ್ಜದಿಂ ಶೂದ್ರರುನಿನ್ನ ಅವಯವದಲ್ಲಿ ಸಕಲವಂ ಪಡೆದ ಪ್ರ-ಸನ್ನ ಕಾಗಿನೆಲೆಯಾದಿಕೇಶವರಾಯ 3

ವರವ ಕೊಡು ಎನಗೆ vara va kodu enage

ವರವ ಕೊಡು ಎನಗೆ ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಪ
ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ 1
ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ2
ರವಿಕೋಟಿ ತೇಜಪ್ರಕಾಶೆ - ಮಹಾಕವಿ ಜನರ ಹೃತ್ಕಮಲ ವಾಸೆಅವಿರಳ ಪುರಿ ಕಾಗಿನೆಲೆಯಾದಿಕೇ-ಶವನ ಸುತನಿಗೆ ಸನ್ನುತ ರಾಣಿವಾಸೆ 3

ಲಾಲಿ ಪಾವನ ಚರಣ laali pavana charana

ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ
ವನಜಾಕ್ಷ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1
ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2
ನಂದಗೋಪ ಕುಮಾರ ನವನೀತ ಚೋರಮಂದಾಕಿನೀ ಜನಕ ಮೋಹನಾಕಾರಇಂದುಧರ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3
ಪಕ್ಷಿವಾಹನ ವಿಷ್ಣು ಪಾಹಿ ಪರಮೇಶರಕ್ಷ ಕೌಸ್ತುಭಭೂಷ ವೈಕುಂಠವಾಸಅಕ್ಷಯ ಫಲದಾತ ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4
ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5

ರಾಮಾನುಜರೇ ನಮೋ raamanujare namo

ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ ಪ
ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ 1
ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ 2
ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ 3

ರಾಮಾನುಜ ಮತೋದ್ಧಾರ Raamanuja matoddara

ರಾಮಾನುಜ ಮತೋದ್ಧಾರಕತಾಮಸಗುಣಪಾಶಗಿರಿವಜ್ರದಂಡ ಪ
ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿಹೇಸದೆ ಕಟ್ಟಿ ಪೂಜಿಪರು ನೋಡವ್ಯಾಸರದೊಂದು ತೋಳಿಗೆ ಶಿವಶರಣನಸಾಸಿರ ತೋಳ್ಗಳ ತರಿದ ನಮ್ಮಯ್ಯ 1
ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನುಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳುಹರಹರ ಎಂಬ ಶೈವರ ಏಳ್ನೂರುಶಿರಗಳನರಿದನು ನಮ್ಮ ತಾತಯ್ಯ2
ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣುಮಸ್ತಕ ಮಹಾದೇವ ಮೇಲೆಂಬರುಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ 3
ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವಸಂಗನ ಶರಣರೆಲ್ಲರು ಕೇಳಿರಿಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮರಂಗನ ಪ್ರಸಾದವು ಲೋಕಪಾವನವು 4
ಧರೆಯೊಳು ವಿರಕ್ತರು ವೀರ ಪವಾಡವಇರಿದು ಎಬ್ಬಿಸುವೆವೆಂದಾಡುವರುಹರಿಯ ನಾಮಾವಳಿಯ ಅನುಮಾನವಿಲ್ಲದೆಯೆಧರಿಸಿದಲ್ಲದೆ ದೊರೆಯದು ಗತಿಯಣ್ಣ 5
ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣನರಮನೆಯ ಮುಂದೆ ಭಿಕ್ಷವ ಬೇಡಲುಹರಿಯುಂಡ ಮೇಲೆ ಪ್ರಸಾದವ ನೀಡಲುಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ 6
ಶಿವ ಮಹಾದೇವನು, ಧರೆಗೆ ಹರಿಯೆ ದೈವಭುವನಕ್ಕೆ ಹರಿಹರರೇಕಸ್ಥರುಭವರೋಗ ಹರ ಕಾಗಿನೆಲೆಯಾದಿಕೇಶವನವಿವರ ತಿಳಿದು ಭಜಿಸಿರೊ ಭಕ್ತ ಜನರು7

ರಾಮನಾಮವ ನೆನೆ ಮನವೆಪ ramnavami nene manavepa

ರಾಮನಾಮವ ನೆನೆ ಮನವೆಪ
ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿರೆ ಅ
ತರುಣತನದಿ ದಿನ ದಾಟಿತು ಸುಮ್ಮನೆಶರೀರದೊಳು ಸ್ವರವಾಡುತಲೆತರುಣಿ ಸುತರು ಸಂಸಾರವೆಂಬಶರಧಿಯೊಳಗೆ ಮುಳುಗಿರದೆ ಮನವೆ 1
ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆಸಿಗುವುದೆ ನಿಜದಿಂ ಈ ಸಮಯಮುಗುಧನಾಗಿ ಮತ್ತೆ ಜನಿಸಿ ಬರುವುದುಸೊಗಸು ಕಾಣುವುದೆ ಛಿ ಮನವೆ 2
ಚಿಂತೆಯನೆಲ್ಲ ಒತ್ತಟ್ಟಿಗಿಟ್ಟುಅಂತರಂಗದಲಿ ಧ್ಯಾನಿಸುತಕಂತುಪಿತ ಕನಕಾದಿಕೇಶವನಎಂತಾದರೂ ನೀ ಬಿಡಬೇಡ ಮನವೆ3

ಬೇಡ ಬೇಡ ಎಲೆಲೆ ದುರಿತಗಳಿರಾ beda beda ele duritagala

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮಬಾಡದಾಧಿಪನ ಕಿಂಕರನ ಕೂಡ ತೊಡರು ಪ
ವಾರಿಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?ಭೂರಿ ಭೂತಗಳೆ ಭೂಸತಿಯ ಕಾಂತನ ನಾಮಧಾರಿಗಳ ತೊಡರು ನಿಮಗಳವಡದು ನಾನರಿವೆ 1
ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ 2
ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ 3

ಬೇಕೆಂದರೆ ಬಾರದು bekendare baarado

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ
ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1
ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ
ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3

ಬೀದಿಯೊಳು ಯಾತರಾ Beediyolu yaatara

ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಪ
ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಅ
ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ 1
ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ 2
ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ 3

ಬಾಲಕನೆಂದೆತ್ತಿಕೊಂಡೆನೆ balakanendettikondene

ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ
ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ
ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1
ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2
ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3

ಬಾರೊ ಭಾಗ್ಯದ ನಿಧಿಯೆ Baaro bhagyada nidhiye

ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಪ
ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ಅ
ವಿಜಯ ನಿಮ್ಮಯ ಪಾದ ಭಜಕರಿಗೆ ಕೊಡಲಿವಿಜಯ ದಶಮಿಯಲ್ಲಿ ವಿಜಯರಥದಲ್ಲಿ ಕೂತುವಿಜಯಳ ಸಹಿತದಿ ವಿಜಯ ಮಾಡುತ ಬಾರೊವಿಜಯ ಸಾರಥಿ ಆದಿವಿಜಯ ರಥದಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ 1
ದಶದಶನಂದ ಏಕಾದಶ ಚಂದ್ರಶೇಖರ ದ್ವಾ-ದಶಾದಿತ್ಯ ಮಾರುತರು ದಶ ವಿಶ್ವದೇವ ಯಾತ್ರಾದಶನಾ ಏಕಾ ಸರ್ವದಾದಶಋಷಿ ಮುನಿ ನೃಪ ದಶದಿಕ್ಕಿನ ಜನರುದಶಮ ಉತ್ಸವ ನೋಡಿ ದಶದಶದಲಿ ನಿಂದುದಶಮತಿ ವಂದಿತ ದಶಶಿರ ಸಂಹರದಶರೂಪದಲಿ ಖಳದಶನ ಮೂರುತಿಯೆಂದುಹೆಸರು ಹೇಳುವರು2
ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖಪದುಮ ಜನ ಪಡೆದು ಪದುಮಜಾಂಡವಡೆದಿಪದುಮ ಪೀಠನ ಹೃತ್ಪದುಮದಿ ನಿನ್ನಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವಹದುಳದಿಂದ ಬಾರೊ ಭಾಗ್ಯದ ನಿಧಿಯೆ 3

ಬಾಯಿ ನಾರಿದ ಮೇಲೆ baayi naarida mele

ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತೌರಾಸೆಯೆ ಪ
ಕಣ್ಣು ಕೆಟ್ಟ ಮೇಲೆ ಕಡುರೂಪು ಚೆಲ್ವಿಕೆಯೆಬಣ್ಣಗುಂದಿದ ಮೇಲೆ ಬಹುಮಾನವೆಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ 1
ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆಚಳಿಜ್ವರಕೆ ಚಂದನದ ಲೇಪ ಹಿತವೆಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆಬೆಲೆಬಿದ್ದ ಸರಕಿನೊಳು ಲಾಭ ಉಂಟೆ 2
ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆಸತ್ತ್ವ ತಗ್ಗಿದ ಮೇಲೆ ಸಾಮಥ್ರ್ಯವೆಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ 3

ಬಾಗಿಲನು ತೆರೆದು ಸೇವೆಯನು Baagilanu teredu

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ
ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1
ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2
ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3

ಬಲ್ಲೆ ಬಲ್ಲೆನು ನಿನ್ನ balle balleno ninna

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ
ಬಲ್ಲಿದವರ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ
ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1
ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2
ವಿದ್ಯೆ ಬುದ್ಧಿಗಳೇನು ಫಲವು ನೆನೆದ ಕಾರ್ಯ ಸಿದ್ಧಿಯಾಗದೆನಗೆ ಮುದ್ದು ಮುಖದಿ ಮಾರುತ್ತರವ ಕೊಡುವ ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3
ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4
ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5

ಬಲ್ಲವರೆ ಬಲ್ಲರು ballavare ballaru

ಬಲ್ಲವರೆ ಬಲ್ಲರು ಎಲ್ಲವರು ಅರಿಯರುಪುಲ್ಲಲೋಚನ ಪರಬ್ರಹ್ಮನೆಂಬುದನು ಪ
ಅಜe್ಞÁನಾಧಿಕ ಬಲ್ಲ ಅನ್ನಲಸ್ನೇಹಿತ ಬಲ್ಲಗಜ ಚರ್ಮಾಂಬರ ಬಲ್ಲ ಗರುಡ ಬಲ್ಲಭುಜಗೇಶ್ವರ ಬಲ್ಲ ಭೂರಿಲೋಚನ ಬಲ್ಲತ್ರಿಜಗದಧಿಪತಿ ತ್ರಿವಿಕ್ರಮನೆಂಬುದನು1
ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲಮಕರಕುಂಡಲಧರ ಪರಾತ್ಪರನೆಂಬುದನು 2
ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲಸಂಭ್ರಮದಿ ಮನು ಬಲ್ಲ ಸಹದೇವ ಬಲ್ಲಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲಕಂಬು ಚಕ್ರಧರ ಕರ್ಮಹರನೆಂಬುದನು 3
ವಶಿಷ್ಠಮುನಿ ಬಲ್ಲ ವರ ವಿಭೀಷಣ ಬಲ್ಲವಿಶಿಖಶಯನ ಬಲ್ಲ ವಿದುರ ಬಲ್ಲಋಷಿ ವಾಲ್ಮೀಕಿ ಬಲ್ಲ ರಾಜ ವಿದೇಹ ಬಲ್ಲಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು 4
ವಾಗಿನಿಂದಕ್ರೂರ ಬಲ್ಲ ವಚನಿ ಶೌನಕ ಬಲ್ಲಯೋಗಿ ಕಪಿಲ ಬಲ್ಲ ಭೃಗು ಬಲ್ಲನುತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲಕಾಗಿನೆಲೆಯಾದಿಕೇಶವ ಕೈವಲ್ಯನೆಂಬುದನು 5

ಬಲಗೊಂಬೆ ಚೆನ್ನರಾಯ balagombe chennaraya

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ಪ
ವೇದ ವಾದಗಳಲ್ಲಿ | ಕಾಡುವ ಜನರಲ್ಲಿಓದುವ ವಿದ್ಯೆಗಳಲ್ಲಿ | ವಾದವ ಗೆಲಿಸಯ್ಯ 1
ಆರು ವೈರಿಗಳಲ್ಲಿ | ಅಷ್ಟ ಗಜಂಗಳಲ್ಲಿಮೂರು ಏಳರಲ್ಲಿ | ಮುಂದೆ ನೀ ಗೆಲಿಸಯ್ಯ2
ಪರಮ ಭಕ್ತಿಯೊಳ್ನಿನ್ನ | ಚರಣಕೆರಗುವೆ ಮುನ್ನಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ3

ಬಯಗುತನಕ ಆಟ Bayagutanaka aata

ಬಯಗುತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ಪ
ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ಅ
ಪುರಾಣವಿಲ್ಲ ಪುಣ್ಯಕತೆಯಿಲ್ಲ ಪಾರಾಯಣದಿ ಮನಸಿಲ್ಲತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ 1
ಕಣ್ಣಿಗೆ ಜೋಂಪು ಹತ್ತುವತನಕ ಅನ್ಯವಿಷಯ ಮಾತುಕತೆಯಾಟಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ2
ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರೂ ಸಲಹೊ ಸಿರಿಕಾಗಿನೆಲೆಯಾದಿಕೇಶವ ಶಿರಬಾಗಿ ಬೇಡಿಕೊಂಬೆ 3

Friday, 29 November 2019

ಬದುಕಿದೆನು ಬದುಕಿದೆನುbadukideno badukideno

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಪ
ಪದುಮನಾಭನ ಪಾದದೊಲುಮೆ ಎನಗಾಯಿತು ಅ
ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು 1
ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ 2
ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತುತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ 3

ಬಂಧುಗಳದಾರಿಗಾರಿದ್ದರೇನು bandugaliddarenayifo

ಬಂಧುಗಳದಾರಿಗಾರಿದ್ದರೇನು - ಇಷ್ಟಬಂಧು ತ್ರೈಜಗಕೆ ಶ್ರೀಹರಿಯಲ್ಲದೆ - ಮಿಕ್ಕಬಂದುಗಳದಾರಿಗಾರಿದ್ದರೇನು ಪ
ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ - ಆನೆಗಳೇನ ಮಾಡುತಿರ್ದವಡವಿಯಲಿನಗಜೆಯಾಳ್ದನ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾದಿಗಳೇನ ಮಾಡುತಿರ್ದರಾ ಶೈಲದೊಳಗೆ 1
ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲುಮಂಡಲ ಪತಿ ಏನ ಮಾಡುತಿರ್ದನುಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲುಗಂಡರೈವರು ನೋಡಿ ಏನ ಮಾಡುತಿರ್ದರಯ್ಯ 2
ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆಮಿಗೆ ಸತಿಸುತರೇನ ಮಾಡುತಿರ್ದರುಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆಮಿಗು ಬಂಧುಗಳದಾರಿಗಾರಿದ್ದರೇನು 3

ಬಂದೆವಯ್ಯ ಗೋವಿಂದಶೆಟ್ಟಿ bandenayya Govindshetti

ಬಂದೆವಯ್ಯ ಗೋವಿಂದಶೆಟ್ಟಿ - ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ಪ
ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ1
ಒಡೆದ ಮಡಕೆ ತಂದು ಇಡಿದು ನಾಮವ ಮಾಡಿಕೊಡುವೆ ನೀ ಕಾಸಿಗೆ ಒಂದೊಂದನುಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ 2
ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ 3

ಬಂದಿದೆ ದೂರು ಬರಿದೆ bandide durupyog bandide

ಬಂದಿದೆ ದೂರು ಬರಿದೆ ಪಾಂಡವರಿಗೆ ಪ
ಕೊಂದವರಿವರು ಕೌರವರನೆಂಬಪಕೀರ್ತಿ ಅ
ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1
ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2
ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3
ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4
ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5
ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6
ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7

ಬಂದದೊಂದು bandadondu

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ಪ
ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ 1
ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ 2
ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ3

ಬಂಟನಾಗಿ ಬಾಗಿಲ bantanaagi baagilanu

ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ
ವೈಕುಂಠದ ಸೊಂಪಿನ ದಾಸರ ಮನೆಯ ಅ
ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1
ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2
ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3
ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4
ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5

ಪ್ರಾಚೀನ ಕರ್ಮವಿದು prachina karmaveedu

ಪ್ರಾಚೀನ ಕರ್ಮವಿದು ಬಿಡಲರಿಯದುಯೋಚನೆಯ ಮಾಡಿ ಬಳಲುವುದೇಕೆ ಮನುಜ ಪ
ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯಿಂದಲಿ ರಾವಣನ ಕೊಲ್ಲಿಸಿಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು 1
ಲೋಕಾದಿಲೋಕಗಳ ಚರಿಸುವ ರವಿರಥಕೆಏಕಗಾಲಿಯು ಏಳುಕುದುರೆಗಳ ಕಟ್ಟಿಲೋಕಲೋಕಗಳನೆಲ್ಲ ಚರಿಸುವ ಅರುಣನಿಗೆಬೇಕೆಂದು ಚರಣಗಳ ಕೊಡಲಿಲ್ಲ ಹರಿಯು 2
ಸಾಸಿರ ನಾಮದ ಒಡೆಯಾದಿಕೇಶವನಬೇಸರಿಸದೆ ಹೆಗಲ ಮೇಲಿರಿಸಿಕೊಂಡುಆಕಾಶ ಮಾರ್ಗದಲಿ ಚರಿಸುವ ಗರುಡನಿಗೆನಾಸಿಕದ ಕೊನೆಡೊಂಕು ತಿದ್ದಲಿಲ್ಲ ಹರಿಯು 3

ಪೋಗದೋ ಛಳಿ ಪೋಗದೋ pogado chali pogado

ಪೋಗದೋ ಛಳಿ ಪೋಗದೋ ಪ
ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆಬಿಳಿಯ ಕಂಬಳಿ ಪೊತ್ತರೆ ಪೋಗದೋನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟುಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ1
ಬಡನಡುವಿನ ಬಟ್ಟಕುಚದ ಕಾಮಿನಿರನ್ನೆಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲುಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ2
ಛಳಿಗಾರದೆ ವಿಷ್ಣು ಛಳಿಗಾರದೆ ಶಿವಘಳಿಲನೆ ಗಂಗೆಯ ಬೀಸಾಡಲುಛಳಿಯ ಕಾರಣವೇನು ನೆಲೆಯಾದಿಕೇಶವತಿಳಿದು ನೀ ಹೇಳಯ್ಯ ಕಳಿಯ ವಿವರವನು 3

ಪೂರ್ವ ಜನ್ಮದಲಿ ನಾ ಮಾಡಿದ poorva Janmadali naa maadida

ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಪ
ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣಅ
ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ1
ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ ಮುದ್ದುಕೃಷ್ಣ 2
ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದುನೀ ಕೇಳಿ ಬಲ್ಲೆಯಾ ಕೃಷ್ಣಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನು ಮಾಡಯ್ಯ ಕೃಷ್ಣರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದುಆಕೆಗಕ್ಷಯವಿತ್ತೆ ಕೃಷ್ಣನಾ ಕಾಣುವಂದದಲಿ ಉಡುಪಿಯಾದಿಕೇಶವಏಕೆ ದರಶುನವೀಯೆ ಕೃಷ್ಣ 3

ಪಾಪಾತ್ಮ ನಾನಲ್ಲ papatma naanalla

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಪ
ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಅ
ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ 1
ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ2
ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು ಮಾಡುವರು 3
ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿಇನಿತುಂಟೆ ಕಪಟನಾಟಕ ಸೂತ್ರಧಾರಿಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದಎಣಿಕೆಗಾನಲ್ಲ ನೀನಲ್ಲದಿಲ್ಲ 4
ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖದಿಂದ ಕಚ್ಚಿಸಲು ಆ ತಪ್ಪು ಕಂದನದೆಮುಂದರಿಯದe್ಞÁನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ5_____

ಪರಮಪದವಿಯನೀವ ಗುರುಮುಖ್ಯ paramaatma padaviyuva

ಪರಮಪದವಿಯನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪ
ಅಂದು ತ್ರೇತಾಯುಗದಿ ಹನುಮನಾಗವತರಿಸಿಬಂದು ದಾಶರಥಿಯ ಪಾದಕೆರಗಿಸಿಂಧುವನು ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ1
ದ್ವಾಪರಯುಗದಲಿ ಭೀಮಸೇನನೆನಿಸಿಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ ದುಶ್ಶಾಸನನನು ಸೀಳಿಭೂಪನ ಜಲದೊಳಗೆ ಕರೆಕರೆದು ಜರೆದವನ 2
ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನೆ ಸೋಲಿಸಿಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ 3

ಪರಮ ಪುರುಷ ಹರಿ ಗೋವಿಂದ paramaatma purusha hari govindana

ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ
ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1
ಜತನದಿ ಮಧುಮಥನದಿ ಮಂದರ ಪರುವತ ಉದ್ಧರಿಸಿದೆ ಗೋವಿಂದಶತ ಕ್ರತುವಿನ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2
ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3
ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4
ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5
ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6
ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7
ಮಾರಣ ಕ್ರತು ಸಂಪೂರಣ ಕಂಸ ಸಂ-ಹಾರಣ ಭುಜಬಲ ಗೋವಿಂದವಾರಣಪುರಪತಿ ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8
ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9
ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10
ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11

ಪರಮ ಪದವಿಯೆ paramma padaviya

ಪರಮ ಪದವಿಯೆ ಶ್ರೀರಂಗಂಪರವಾಸುದೇವರೆ ಶ್ರೀರಂಗಂ ಪ
ವೇದನಾಲ್ಕು ಶೃಂಗಾರವಾದಓಂಕಾರ ವಿಮಾನವೆ ಶ್ರೀರಂಗಂಸಾಧಿಸಿ ಪೂರ್ವಾಚಾರ್ಯರು ನೆಲಸಿಹಆದಿ ವಿಮಾನವೆ ಶ್ರೀರಂಗಂ 1
ಸತ್ಯಲೋಕದಲಿ ಬ್ರಹ್ಮನು ಪೂಜಿಪವಸ್ತು ವಿಮಾನವೆ ಶ್ರೀರಂಗಂಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದಉತ್ತಮಾಯೋಧ್ಯವೆ ಶ್ರೀರಂಗಂ2
ತ್ರೇತಾಯುಗದಿ ವಿಭೀಷಣನಿಗೆ ರಘುನಾಥನು ಕೃಪೆ ಇತ್ತ ಶ್ರೀರಂಗಂಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗನಾಥ ನೆಲಸಿಹ ಶ್ರೀರಂಗಂ 3
ಮುನ್ನ ಕಾವೇರಿ ಉಭಯ ಮಧ್ಯದೊಳಿನ್ನು ಶೋಭಿಪುದೆ ಶ್ರೀರಂಗಂಸನ್ನುತ ಭಕ್ತರ ಸಲಹುವ ಬಿರುದಿನೊಳಿನ್ನು ತೋರುವುದೆ ಶ್ರೀರಂಗಂ4
ಶೇಷನ ಮೇಲೆ ಪವಳಿಸಿ ಲಂಕಾದೇಶವ ನೋಡುವ ಶ್ರೀರಂಗಂಶ್ರೀಸಿರಿನಾಯಕೀ ರಮಣಕೇಶವರಾಯರ ಮಹಿಮೆಯೆ ಶ್ರೀರಂಗಂ 5

ಪಥ ನಡೆಯದಯ್ಯpath nadeyadayya

ಪಥ ನಡೆಯದಯ್ಯ ಪರಲೋಕ ಸಾಧನಕೆ - ಮ-ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ಪ
ತನುರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆವಘನಸಿಂಹ ಗಜ ಮೃಗಗಳಿಂದೊಪ್ಪುವವನಿತೆಯರ ಕಾಯ ಕಾಂತಾರವೆಂಬ ಮಾರ್ಗದಿಸ್ತನದ್ವಯ ಕಣಿವೆಯ ಮಧ್ಯೆ ಸೇರಿಹನು 1
ಗಿಳಿ ನವಿಲು ಕೋಗಿಲೆ ವಸಂತ ಭ್ರಮರಂಗಳಬಲದೊಡನೆ ಮದನ ಮಾರ್ಗವ ಕಟ್ಟಲುಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳುಸುಲಿಸಿಕೊಂಡರು, ಕೆಲರು ಸಿಕ್ಕಿದರು ಸೆರೆಯ 2
ಕಾಳಗದೊಳಿದಿರಿಲ್ಲ ಸುರರು ದಾನವರು - ಕ-ಟ್ಟಾಳು ಮನ್ಮಥನ ಛಲದಂಕ ಬಿರುದುಪೇಳಲೆನ್ನಳವೆ ಬಡದಾದಿಕೇಶವರಾಯ-ನಾಳ ಸಂಗಡ ಹೋದರಾವ ಭಯವಿಲ್ಲ 3
* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಪಕ್ಷಿ ಬಂದಿದೆ ಗಂಡಭೇರುಂಡ pakshi bandide Gandaberunda

ಪಕ್ಷಿ ಬಂದಿದೆ ಗಂಡಭೇರುಂಡ - ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಪ
ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ಅ
ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ1
ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು 2
ಪಾಖಂಡವೆಂತೆಂಬ ಪರವಾದಿಗಳನ್ನುಲೋಕದೊಳು ತಮ್ಮೊಳಗೈಕ್ಯಮಾಡಿ ಜಗದೇಕ ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು 3

ನೋಡು ನೋಡು ಗೋಪಿ nodu nodu gopi

ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ ಪ
ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ ಅ
ಮಾನಿನೀಯರೊಳಗೆ ಪೋಕಾಟವೇನಿದುಮಾನವನ್ನು ಕಳೆದ ಪರಿಯ ಹೇಳತೀರದು 1
ಪಿಡಿದ ಸೆರಗ ಬಿಡನು ಇನ್ನೇನ ಮಾಡಲಿತಡೆಯಲಾರೆವಮ್ಮ ಕೇಳೆ ಇವನ ಹಾವಳಿ 2
ಇನ್ನು ಚೆನ್ನಕೇಶವ ಕದಳಿ ರಂಗನಬನ್ನಣೇಯ ಮಾತ ಕೇಳಿ ಬಿಡುವೆ ಪುರುಷನ 3

Thursday, 28 November 2019

ನೋಡಿ ಮರುಳಾಗದಿರು nodi marulagadiry

ನೋಡಿ ಮರುಳಾಗದಿರು ಪರಸತಿಯರ ಪ
ನಾಡೊಳಗೆ ಕೆಟ್ಟವರ ಪರಿಯ ನೀನರಿತು ಅ
ಶತಮಖವ ಮಾಡಿ ಸುರಸಭೆಗೈದ ನಹುಷ ತಾನಾತುರದಿ ಶಚಿಗೆ ಮನಸೋತು ಭ್ರಮಿಸಿಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದಗತಿಗೆಟ್ಟು ಉರಗನಾಗಿದ್ದ ಪರಿಯರಿತು 1
ಸುರಪತಿಯು ಗೌತಮನ ಸತಿಗಾಗಿ ಕಪಟದಿಂಧರೆಗೆ ಮಾಯಾವೇಷ ಧರಿಸಿ ಬಂದುಪರಮ ಮುನಿಯ ಶಾಪದಿಂದಂಗದೊಳು ಸಾ-ಸಿರ ಕಣ್ಗಳಾಗಿರ್ದ ಪರಿಯ ನೀನರಿತು 2
ಸ್ಮರನ ಶರತಾಪವನು ಪರಿಹರಿಸಲರಿಯದೆದುರುಳ ಕೀಚಕನು ದ್ರೌಪದಿಯ ತುಡುಕಿಮರುತ ಸುತ ಭೀಮನಿಂದಿರುಳೊಳಗೆ ಹತನಾಗೆನರಗುರಿಯೆ ನಿನ್ನ ಪಾಡೇನು ಧರೆಯೊಳಗೆ3
ಹರನ ವರವನು ಪಡೆದು ಶರಧಿ ಮಧ್ಯದೊಳಿದ್ದುದುರುಳ ದಶಶಿರನು ಜಾನಕಿಯನೊಯ್ಯೆಧುರದೊಳಗೆ ರಘುವರನ ಶರದಿಂದ ಈರೈದುಶಿರಗಳನೆ ಹೋಗಾಡಿಸಿದ ಪರಿಯನರಿತು 4
ಇಂತಿಂಥವರು ಕೆಟ್ಟು ಹೋದರೆಂಬುದನರಿತುಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದಕಂತುಪಿತ ಕಾಗಿನೆಲೆಯಾದಿಕೇಶವನ ನಿ-ರಂತರದಿ ಭಜಿಸಿ ನೀ ನಿತ್ಯಸುಖಿಯಾಗು 5

ನೋಡಯ್ಯ ನಿನ್ನ nodayya ninna

ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ
ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1
ಅಮರ ದೈತ್ಯರು ಕೂಡಿ ಅಂಬುಧಿಯ ಕಡೆಯಲಿಕೆಕ್ರಮದಿ ಮಂದರಕೆ ಕಟ್ಟಿದ ಶೇಷನತಮತಮಗೆ ಪಿಡಿದೆಳೆಯೆ ತಲ್ಲಣಿಸಿ ಫಣಿರಾಜಸಮ ವಿಷದ ಕರ್ಬೊಗೆಯನುಗುಳುತಿರಲುಮಮಕಾರ ತತ್ತ್ವದಲಿ ಮತ್ತೊಂದು ರೂಪಾಗಿಅಮಿತಗುಣ ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2
ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3
ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4
ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5
ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6
ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7
ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8
ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9
ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10
ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11

ನೊಂದೆ ನಾ ಹರಿಯೆನ್ನದೆ nonde naa hariyannade

ನೊಂದೆ ನಾ ಹರಿಯೆನ್ನದೆ ಪ
ನೊಂದೆ ನಾ ಸತ್ತು ಹುಟ್ಟುವ ಕೋಟಲೆಗಳಿಂದನೊಂದೆ ನಾ ಪಂಚೇಂದ್ರಿಯಗಳ ಬಾಧೆಗಳಿಂದನೊಂದೆ ನಾ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ
ಒಂದು ಕ್ಷಣ ದುರ್ಗಂಧ ವಾಯು ಬರೆ ಹೇಸುವರುತಂದೆಯುದರದಿ ಮೂರು ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1
ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2
ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3
ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4
ತಂದೆತಾಯಿಗಳಾರು ಇದ್ದ ಊರಾವುದುಹೊಂದಿದ್ದ ಮನೆಯೆಲ್ಲಿ ಇದ್ದ ಸತಿ ಸುತರಾರುಹಿಂದಿದ್ದ ಕುಲಗೋತ್ರ ನಾಮಂಗಳೆನಗೆಷ್ಟುಬಂದಂಥ ಸುಖದುಃಖವೆಷ್ಟುಅಂದು ಕೊಂದವರಾರು ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ

ನೇಮವಿಲ್ಲದ ಹೋಮ nemavillada homa

ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ ಪ
ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು 1
ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ 2
ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ3

ನೆರೆದು ಗೋಪಿಯರೆಲ್ಲರು neredu gopiyarellaru

ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ
ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1
ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2
ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3
ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4
ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5
ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6
ಹಸುಮಗು ನೋಡಿದರೆ - ತಾಟಕನಿವಮೊಸರು ಕಡೆಯುತಿರಲುಮಿಸುಕದೆ ಬಂದು ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7
ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8
ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9
ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10

ನೆನೆಯೋ, ಎಲೆ ಮನವೆ neneyo ele manave

ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ ಪ
ನೆನೆಯೋ ಗೋಪೀತನಯ ಕಂಸನ ಮನೆಯ ಕೊಂಡಾತನ ಅ
ತರಳ - ಚೆಲುವ ಮುಂಗುರುಳಹುಲಿಯುಗುರ ಕೊರಳಉಂಗುರಗಳ ಬೆರಳಕಾಲಿಗೆ ಕಟ್ಟಣಳನಿಲುವುತಿಹ ದುರುಳತನದಲಿ ತುರುಗಳ ಕಾಯ್ದವನ 1
ವಿಷವನುಣಿಸಿ ತಲ್ಲಣಿಸುವಹುರಿತ ಸಹೊಸವ (ದುರಿತ ಸಹವಾಸವ ?)ಆದರಾವಿ ದಾಸವ (ಅದರ ವಿಲಾಸವ ?)ನೋಡಿದರೆ ಸಿಸುವಾಗಿಬಲು ಅಸುರರ ಗೆಲಿದವನ 2
ಸಲಯ ಕಾಳಿಂಗನತಲೆಪಿಡಿದ ಕಂಗೊಲೆಯಮೊರೆ ಕೇಳಿ ಬಲಿಯಅವನ ಕೋಮಲೆಯಕಿವಿಗೆ ಪೂಮಾಲೆಯಾದ ನೀಟುಗಾಯನೆಲೆಯಾದಿಕೇಶವನ 3

ನೆನೆಯ ಬಾರದೆ ಮನವೆ neneya baarade manave

ನೆನೆಯ ಬಾರದೆ ಮನವೆ ಪರಮಪಾವನನ ಪ
ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ-ನೇಕ ಮೂರುತಿ ಸೂರ್ಯನಾರಾಯಣನ 1
ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ 2
ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ 3

ನೆಚ್ಚದಿರು ಸಂಸಾರ nechadiru sansara

ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯಅಚ್ಯುತನ ನಾಮವನು ನೆನೆದು ಸುಖಿಯಾಗೊ ಪ
ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನುಗಳಿಸದಿರು ನೀ ದುರಿತರಾಶಿಗಳನುನಳಿನನಾಭನ ದಿವ್ಯ ನಾಮವನು ನೆನೆನೆನೆದುನೆಲೆಯಾದ ಪರಮ ಪದವಿಯ ಪಡೆಯೊ ಮನವೆ 1
ನೋಡದಿರು ಪರಸತಿಯ ಕೂಡದಿರು ದುರ್ಜನರಆಡದಿರು ಮಾತುಗಳ ಗರ್ವದಿಂದಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ-ಡಾಡದಿರು ಬೀದಿಗೂಳುಂಬ ದೈವಗಳ 2
ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದುಮಾನಕ್ಕೆ ಮೆಚ್ಚಿ ನೀ ಮರುಳಾಗದೆಜಾಣತನದಿಂ ಕಾಗಿನೆಲೆಯಾದಿಕೇಶವನಮಾನಸದಲಿ ನೆನೆದು ಸುಖಿಯಾಗು ಮನುಜ 3

ನೀನೇನು ಮಾಡಲಾಪೆನಾನು neenenu maadalape naanu

ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ಪ
ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹಹೀನತ್ವವನು ನೀನು ಕಳೆಯಲಾಪೆಯನಾನು ನನ್ನದು ಎಂಬ ಅಹಂಕಾರವಿರೆ ನಿನ್ನಧ್ಯಾನಿಸಲು ಬುದ್ಧಿಯ ಕೊಡಲಾಪೆಯ 1
ಸಂಚಿತವಾಗಿರುವ ಪ್ರಾರಬ್ಧದೊಳಗೊಂದುಕಿಂಚಿತಾದರೂ ನೀನು ಕಳೆಯಲಾಪೆಯಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗವಂಚನೆ ಇಲ್ಲದೆ ನೀನಡ್ಡ ಬರಲಾಪೆಯ2
ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳುಬರೆದ ಬರೆಹವನು ನೀನು ತೊಡೆಯಲಾಪೆಯಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನಸ್ಮರಣೆಗೈಯಲು ಕಾಯದಿರಲಾಪೆಯ 3

ನೀನುಪೇಕ್ಷೆಯ ಮಾಡೆ neenupeksheya maade

ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆನಿಗಮಗೋಚರ ಮುಕುಂದ ಪ
ಗಾನರಸಲೋಲ ಆಗಮಶೀಲ ಭಕ್ತಪರಿಪಾಲಸನ್ನುತ ಗೋಪಾಲ ಬಾಲ ಅ
ಜಪತಪಾನುಷ್ಠಾನ ಜಪಿತನೆಂದೆನಿಸುವೆನೆಅಪ್ಪ ಜಾಣತನವೆನ್ನೊಳಿಲ್ಲಗುಪಿತದಿಂ ದಾನ ಧರ್ಮವನು ನಾ ಮಾಡುವೆನೆಅಪರಿಮಿತ ಧನವು ಇಲ್ಲಅಪಾರ ಕರ್ಮಗಳ ಅನುಸರಿಸಿ ನಡೆವುದಕೆನಿಪುಣತ್ವ ಮೊದಲೆ ಇಲ್ಲರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆಸುಪವಿತ್ರ ನೀನಲ್ಲದೆ ಇಲ್ಲ - ಸಿರಿನಲ್ಲ 1
ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲುಮೌನದಿಂ ಬಂದು ಕಾಯ್ದೆಹೇ ನಾರಗಾ ಎಂದಜಮಿಳಗೆ ಮುಕ್ತಿಯನುನೀನೊಲಿದು ಕೃಪೆ ಮಾಡಿದೆಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡುದೀನತ್ವವನು ಬಿಡಿಸಿದೆದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿಮಾನಿ ಎನ್ನನೂ ಸಲಹದೆ - ಬರಿದೆ 2
ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡುಬೇಸರದಿ ಮನದಿ ನೊಂದುಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾಘಾಸಿ ಪಡಲಾರೆನಿಂದುವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದುಆಸೆ ಪಡುತಿಹೆನು ಇಂದುದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿಕೇಶವನೆ ಕರುಣಿಸಯ್ಯಾ ಬಂದು3

ನೀನಾರ ಬಾಂಧವನೊ ನಿಖಿಳ neenara bhandavano nikhila

ನೀನಾರ ಬಾಂಧವನೊ ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ
ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1
ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2
ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3
ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4
ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5
ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6
ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7
ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8
ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9