Labels

Sunday, 24 November 2019

ದುರ್ಜನರ ಸಂಗ durjanara sangha

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ,ಸಜ್ಜನರ ಸಂಗದೊಳಗಿರಿಸೆನ್ನ ರಂಗ ಪ
ಉಂಡಮನೆಗೆರಡನು ಎಣಿಸುವಾತನ ಸಂಗಕೊಂಡೆಯವ ಪೇಳಿ ಕಾದಿಸುವನ ಸಂಗತಂದೆ ತಾಯನು ಬೈದು ಬಾಧಿಸುವವನ ಸಂಗನಿಂದಕರ ಸಂಗ ಬಹು ಭಂಗ ರಂಗ 1
ನಂಬಿದ ಠಾವಿನಲಿ ಕೇಡನೆಣಿಪನ ಸಂಗಸಂಭ್ರಮದಿ ಜಗಳ ಕಾಯುವನ ಸಂಗಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗರಂಭೆಯರ ನೋಡಿ ಮೋಹಿಪನ ಸಂಗ2
ಕುಳಿತ ಸಭೆಯೊಳು ಕುಹಕ ಮಾಡುವಾತನ ಸಂಗಬಲು ಬೇಡೆ ಕೊಡದಿರುವ ಲೋಭಿ ಸಂಗಕುಲಹೀನರ ಕೂಡೆ ಸ್ನೇಹ ಬೆಳೆಪನ ಸಂಗಹಲವು ಮಾತಾಡಿ ಆಚರಿಸದನ ಸಂಗ3
ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗಗುರುನಿಂದೆ ಪರನಿಂದೆ ಮಾಡುವನ ಸಂಗಪರಹಿತಾರ್ಥದ ಧರ್ಮ ಪಡೆಯದಾತನ ಸಂಗಪರಮಪಾಮರ ಸಂಗ ಬಹುಭಂಗ ರಂಗ 4
ಆಗಮ ಮಹಾತ್ಮೆಯನು ಅರಿಯದಾತನ ಸಂಗಯೋಗಿಜನ ಗುರುಗಳನು ನಿಂದಿಪನ ಸಂಗರಾಗದ್ವೇಷಾದಿಯಲಿ ಮುಳುಗೇಳುವನ ಸಂಗಕಾಗಿನೆಲೆಯಾದಿಕೇಶವ ಬಿಡಿಸು ಈ ಭಂಗ 5

No comments:

Post a Comment