Labels

Sunday, 24 November 2019

ದಾಸನಾಗಬೇಕು ಸದಾಶಿವನ dasa kada neku

ದಾಸನಾಗಬೇಕು ಸದಾಶಿವನ ದಾಸನಾಗಬೇಕು ಪ
ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ಅ
ಮನದ ಕಲ್ಮಷ ಕಳೆದು - ಮಹಾದೇ-ವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ 1
ತನುವು ಅಸ್ಥಿರವೆನುತ - ತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ 2
ಆರು ಚಕ್ರದಿ ಮೆರೆವ - ಅಖಂಡನಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ 3

No comments:

Post a Comment