Labels

Sunday, 24 November 2019

ತೊರೆದು ಜೀವಿಸುಬಹುದೆ toredu jeevisabhude

ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ಪ
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು 1
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು 2
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು 3

No comments:

Post a Comment