Labels

Wednesday, 27 November 2019

ನಿನಗಿಂತ ಕುಂದೇನೊ ninaginta kundenu

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ
ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ
ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1
ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2
ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3
ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4
ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5

No comments:

Post a Comment