ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು ಪ
ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆಚೆನ್ನಕೇಶವನ ಪ್ರಸಾದಕ್ಕೊದಗಬೇಕು ಅ
ಉಟ್ಟ ಧೋತ್ರವು ಮಾಸಿತು - ಮನದೊಳಗಿರುವದುಷ್ಟರೈವರುಗಳಿಂದ ಕಷ್ಟ ದುರಿತಗಳುಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳುಗಟ್ಯಾಗಿ ಒಗೆಯಬೇಕು 1
ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕುಸಾದರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ 2
ವೇಲಾಪುರದ ಚೆನ್ನಕೇಶವನ ಸೇವೆಗೆಆಲಸ್ಯವನು ಮಾಡದೆಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ 3
Very much thank u I was searching this song from months ago
ReplyDelete