ಗೋವಿಂದ ಎನ್ನಿರೊ - ಹರಿ ಗೋವಿಂದ ಎನ್ನಿರೊ ಗೋವಿಂದನ ನಾಮವ ಮರೆಯೆದಿರಿರೊ \\ಪ. \\
ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ||
ಡಂಭಕತನದಿಂದ ಕಾಯುವ ಜೀವವ ನಂಬಿ ನಚ್ಚಿ ಕೆಡಬೇಡಿ ಕಾಣಿರೊ \\1 \\
ನೆಲೆಯು ಇಲ್ಲದ ಕಾಯ ಎಲವಿನ ಹಂದರವು ಬಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ \\2 \\
ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ ಹರಿಯೇ ಸರ್ವೋತ್ತಮನೆಂದೆನ್ನಿರೊ ||
ಪುರಂದವಿಠಲನ ಸ್ಮರಣೆಯ ಮಾಡಲು ದುರಿತ ಭಯಂಗಳ ಪರಿಹರಿಸುವುದು \\3 \\
Hari Om ! Blessed content creators of this site. Thank you!
ReplyDelete