ಒಲ್ಲನೋ ಹರಿ ಕೊಳ್ಳನೋ ಪಎಲ್ಲ ಸಾಧನವಿದ್ದು ತುಲಸಿ ಇಲ್ಲದ ಪೂಜೆ ಅ.ಪಸಿಂಧು ಸಾಗರ ಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದು ||ಅಂದವಾದಾಭರಣ ಧೂಪ-ದೀಪಗಳಿದ್ದುವೃಂದಾವನ ಶ್ರೀ ತುಲಸಿಯಿಲ್ಲದ ಪೂಜೆ 1
ಮಧುಕ್ಷೀರ ಮೊದಲಾದ ಪಂಚಾಮೃತಗಳಿದ್ದುಮಧುಪರ್ಕ ಪೂಜೋಪಚಾರವಿದ್ದು ||ಮಧುಸೂದನ ಮುದ್ದು ಕೃಷ್ಣನ ಪೂಜೆಗೆಮುದದ ಮೋಹದಳೆಂಬ ತುಲಸಿಯಿಲ್ಲದ ಪೂಜೆ 2
ಕಮಲ ಮಲ್ಲಿಗೆ ಜಾಜಿ ಸಂಪಿಗೆ-ಕೇದಿಗೆವಿಮಲ ಘಂಟೆ ಪಂಚ ವಾದ್ಯವಿದ್ದು ||ಅಮಲ ಪಂಚ ದಿವ್ಯ ಅಮೃತಾನ್ನಗಳಿದ್ದುಕಮಲನಾಭನು ಶ್ರೀ ತುಲಸಿಯಿಲ್ಲದ ಪೂಜೆ 3ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದುತಂತು ತಪ್ಪದ ತಂತ್ರಸಾರವಿದ್ದು ||ಸಂತತ ಸುಖ ಸಂಪೂರ್ಣನ ಪೂಜೆಗತ್ಯಂತ ಪ್ರಿಯಳಾದ ತುಲಸಿಯಿಲ್ಲದ ಪೂಜೆ 4ಪೂಜೆಯ ಮಾಡದೆ ತುಲಸೀ ಮಂಜರಿಯಿಂದಮೂಜಗದೊಡೆಯ ಮುರಾರಿಯನು ||ರಾಜಧಿರಾಜನೆಂಬ ಬಿರುದು ಮಂತ್ರಗಳಿಂದಪೂಜೆ ಮಾಡಿದರೇನು ಪುರಂದರ ವಿಠಲನ 5
No comments:
Post a Comment