Labels

Sunday, 29 March 2020

ಏನು ಇರದ ಎರಡು ದಿನದ ಸಂಸಾರ


ಏನು ಇರದ ಎರಡು ದಿನದ ಸಂಸಾರ
e್ಞÁನದಲಿ ದಾನಧರ್ಮವ ಮಾಡಿರಯ್ಯ ಪ.
ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕು
ಹಸನಾದ ಭೂಮಿಯನು ಧಾರೆಯರೆಯಲು ಬೇಕು
ಪುಸಿಯಾಡದಲೆ ಭಾಷೆ ನಡೆಸಲೇಬೇಕು 1
ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡ
ಕುಳ್ಳಿರ್ದ ಸಭೆಯೊಳಗೆ ಕುಟಿಲ ನಡಿಸಲು ಬೇಡ
ಒಳ್ಳೆಯವ ನಾನೆಂದು ಬಲು ಹೆಮ್ಮಲಿರಬೇಡ
ಬಾಳ್ವೆ ಸ್ಥಿರವೆಂದು ನೀನಂಬಿ ಕೆಡಬೇಡ 2
ದೊರೆ ತನವು ಬಂದಾಗ ಕೆಟ್ಟ ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮರೆಯಬೇಡ
ಸಿರಿವಂತನಾದರೆ ಪುರಂದರವಿಠಲನ
ಚರಣ ಕಮಲವ ಸೇರಿ ಸುಖಿಯಾಗು ಮನುಜ* 3


No comments:

Post a Comment