ಕಣ್ಣೆತ್ತಿ ನೋಡಲುಬೇಡ - ಅವಳ
ಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.
ಕಣ್ಣಿಟ್ಟ ಕೀಚಕ ಕೆಟ್ಟ - ಪರ
ಹೆಣ್ಣಿಗಾಗಿ ರಾವಣ ತಲೆಕೊಟ್ಟ
ಏನು ಮಾಡಿದಳಣ್ಣ ನಷ್ಟ - ಪರ
ಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1
ದೂರದಲ್ಲಿಯ ಸುಖದಣ್ಣ - ಅವಳ
ಚಾರು ಕಂಚುಕದೊಳಗಿನ ಕುಚವಣ್ಣ
ಸೀರೆಯ ಬಿಗಿದುಟ್ಟ ಹೆಣ್ಣ - ಅವಳ
ಓರೆನೋಟ ನೋಡಿ ಹಾರಬೇಡಣ್ಣ 2
ಹಸಿವು ಇಲ್ಲರ ಸವಿಯೂಟ - ತನ್ನ
ವಶಕೆ ಬಾರದ ಪರಹಸ್ವಿನ ಕೂಟ
ದೆಸೆದೆಸೆಗಪಕೀರ್ತಿಯಾಟ - ನಮ್ಮ
ವಸುಧೀಶ ಪುರಂದರವಿಠಲನೊಳ್ನೋಟ 3
No comments:
Post a Comment