ಏನೆಂದಳಯ್ಯ ಸೀತೆ |
ನಿನಗೇನ ಮಾಡಿದಳೊ ಪ್ರೀತೆ ಪ
ದಾನವನ ಪುರದೊಳಗೆ ದಾರಿಯನು ನೋಡುತಲೆ |
ಧ್ಯಾನವನು ಮಾಡುತಿಹಳೊ ಹನುಮಾ ಅ.ಪ
ಎಲ್ಲಿಂದ ಬಂದೆ ಹನುಮಾ - ನೀಯೆನ್ನ -
ಕೇಳುಸೊಲ್ಲೆನ್ನ ಪ್ರೇಮ ||
ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆ
ನಿಲ್ಲಲಾರೆನು ಎಂದಳೊ ಹನುಮಾ 1
ದೇವರಾಯನ ಪಾದವ - ಎಲೆ ಕಪಿಯೆ -
ದಾವಪರಿಯಲಿ ಕಾಂಬೆನೊ ||
ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |
ಹವನವಮಾಡಿಸು ಎಂದಳೊ ಹನುಮಾ || 2
ಅಂಜನಾತನಯ ಕೇಳೊ - ನೀ ಹೋಗಿ -
ಕಂಜನಾಭನಿಗೆ ಪೇಳೊ ||
ಕುಂಜರವಕಾಯ್ದು ಶ್ರೀಪುರಂದರವಿಠಲನ |
ಪಂಜರದ ಗಿಣಿಯೆಂದಳೊ ಹನುಮಾ 3
No comments:
Post a Comment