Labels

Sunday, 29 March 2020

ಎನ್ನ ರಕ್ಷಿಸೊ ನೀನು - ದೇವರ ದೇವ


ಎನ್ನ ರಕ್ಷಿಸೊ ನೀನು - ದೇವರ ದೇವ ಪ
ಎನ್ನ ರಕ್ಷಿಸೊ ನೀನು ಯಾದವ ಕುಲಮಣಿ
ಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.
ಬಾಲನ ಮೊರೆಯನು ಕೇಳಿ ಕೃಪೆಯಿಂದ
ಪಾಲಿಸಿದೆಯೊ ನರಸಿಂಹ ರೂಪದಿಂದ 1
ಪಾಷಾಣ ಚರಣದಿ ಯೋಷಿದ್ರೂಪವ ಗೈದೆ
ದೋಷ ಸಂಹಾರ ನಿರ್ದೋಷಗುಣಪೂರ್ಣನೆ 2
ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯ ಪುರಂದರ ವಿಠಲ 3


No comments:

Post a Comment