Labels

Sunday, 29 March 2020

ಏನು ಕೌತಕ ಕೃಷ್ಣ ತಾನೆ ಕನಸಿನೊಳು


ಏನು ಕೌತಕ ಕೃಷ್ಣ ತಾನೆ ಕನಸಿನೊಳು |
ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪ
ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |
ಮುಂದೆ ಅದರಂದವನು ಎಲ್ಲ ತಾಪೇಳ್ದ ||
ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |
ತಿಂದ ಮೀಸಲಕೊಡೆನು ಎಂದು ಹೇಳಿದೆನು 1
ಮೋಸಹೋದೆನು ನಾನು ದೋಸೆಯನು ಹರಿಗೆ-ಆ-
ಪೋಶನವನಿಕ್ಕದೇ ಪೋಷಿಸಿದೆನು ||
ಮಿಸಲಾದರು ಅಹುದು ದೋಷವಿಲ್ಲೆಂದೆನುತ |
ಆಸುರದ ಮಾತುಗಳ ವಾಸಿತೋರಿಸಿದನು 2
ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |
ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||
ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |
ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3
ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |
ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||
ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |
ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4
ಈ ಮಹಾಮೂರ್ತಿಯನು ಜಾವಪರ್ಯಂತರದಿ |
ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||
ಆ ಮಹಾ ಹರಿಯು ಪರಧಾಮವನು ಕೈಕೊಂಡು |
ಭೂಮಿಪತಿಯಾಗಿರ್ದ ಪುರಂದರವಿಠಲ........................... 5


No comments:

Post a Comment