Labels

Sunday, 29 March 2020

ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ


ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ
ಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪ
ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದ ಮತಿಯಿಂದ ನಾ ಮರುಳಾದೆನೋ ||
ಸಂದಿತೈ ಯೌವನವು ಬುದ್ದಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ 1
ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ತಿನ್ನುತಿಹರು ||
ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆ
ಪುಂಡರೀಕಾಕ್ಷ ನೀ ಪಾಲಿಸೈ ಎನ್ನ 2
ಅಟ್ಟಮೇಲೊಲೆಯುರಿಯುವಂತೆ ಹರಿ ಎನಗೀಗ
ಕೆಟ್ಟ ಮೇಲರಿವು ತಾ ಬಂದಿತಯ್ಯ ||
ನೆಟ್ಟನೇ ಪುರಂದರ ವಿಠಲನೆ ಕೈ ಬಿಡದೆ
ದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ 3


No comments:

Post a Comment