Labels

Thursday, 26 March 2020

ಆಡಿದನೋಕುಳಿಯ ನಮ್ಮ ರಂಗ aadidanokaliya namma ranga


ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ \\ಪ.\\
ಕುಂದದ ಕಸ್ತುರಿಯಅಳಿ ಗಂಧದ ಓಕುಳಿಯ ||
ಬಂದರು ಹೊರಗಿನ ನಾರಿಯರಾಡುತ ಚೆಂದದ ಜೀಕುಳಿಯ \\1\
ಪಟ್ಟಿ ಮಂಚದ ಮೇಲೆನಮ್ಮ ರಂಗ  ಇಟ್ಟ ಮುತ್ತಿನ ಹಾರ
ಬಟ್ಟ ಕುಚಕೆ ಕಣ್ಣಿಟ್ಟು ಒಗೆದನು  ಕುಟ್ಟಿದನೋಕುಳಿಯ 2
ಆರು ಹತ್ತು ಸಾವಿರಗೋಪ | ನಾರಿಯರನು ಕೂಡಿ ||
ಮಾರನಯ್ಯ ಶ್ರೀಪುರಂದರವಿಠಲ ಹಾರಿಸಿ ಜೀಕುಳಿಯ 3


No comments:

Post a Comment