ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |
ಎಂದಪ್ಪಿಕೊಂಬೆ........................... ಪ
ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |
ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪ
ಅರಳೆಲೆಮಾಗಾಯಿ ಕೊರಳ ಪದಕ ಸರ |
ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1
ಅಂದುಗೆ ಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |
ಚೆಂದದಿ ಕುಣಿವ ಮುಕುಂದನ ಚರಣವ................ 2
ಹೊನ್ನಿನ ಉಡುದಾರ ರನ್ನದ ಚೌಕುಳಿ |
ಚಿನ್ನದುಂಗುರವಿಟ್ಟ ಜಾಹ್ನವಿ ಜನಕನ.......................3
ಅಪ್ಪಣ್ಣ ಭಾಗವತನ ರೂಪವು ತಾನಾಗಿ |
ತುಪ್ಪದ ಬಿಂದಿಗೆ ತಂದ ವಿಠಲನ...................... 4
ಪರಿಪರಿ ಭಕುತರ ಮರೆಯದೆ ಸಲಹುವ |
ಪುರಂದರವಿಠಲನ ಸಿರಿಪಾದ ಪದುಮನ 5
No comments:
Post a Comment