Labels

Sunday, 29 March 2020

ಎಂದಿಗೆ ನಾನಿನ್ನು ಧನ್ಯನಹೆನೊ


ಎಂದಿಗೆ ನಾನಿನ್ನು ಧನ್ಯನಹೆನೊ
ಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪ
ಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷ
ಜಲ ಜೀವದೊಳಗೆ ಒಂಬತ್ತು ಲಕ್ಷ ||
ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿ
ತೊಳಲಿ ಬಳಲಿದೆನಂಡಜದೊಳು ದಶಲಕ್ಷ 1
ಚರಣ ನಾಲ್ಕರಲಿ ಮೂವತ್ತು ಲಕ್ಷ ಜೀವಿಸಿ
ನರನಾಗಿ ಚರಿಸಿದೆನು ನಾಲ್ಕು ಲಕ್ಷ ||
ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನ
ಸರಸಿಜ ಸಂಭವನ ಕಲ್ಪದಲ್ಲಿ 2
ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿ
ಅಂಬುಜನಾಭ ನಿನ್ನ ಲೀಲೆಗಾಗಿ ||
ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿ
ಕಂಬುಕಂಧರ ಸಿರಿ ಪುರಂದರ ವಿಠಲ 3


No comments:

Post a Comment