ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ
ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
ಸ್ನಾನ ಸಂಧ್ಯಾವಂದನೆ ಮಾಡದವಗೆ ಹರಿಯ ನಾಮ |
ಜ್ಞಾನವು ಇಲ್ಲದ ಮೂಢಾತ್ಮ ಜನರಿಗೆ ಹರಿಯ ನಾಮ ||
ದಾನಧರ್ಮಕನುಕೂಲ ಇಲ್ಲದವಗೆ ಹರಿಯ ನಾಮ |
ಮಾನುಷ ಜನುಮ ಸಫಲ ಮಾಡುವದೈ ಹರಿಯ ನಾಮ || ೨ ||
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II
Ee. ಗೀತೆಯನ್ನು. ಪಠಿಸುವರಿಗೆ. ಹಾಡುವವರಿಗೂ. ಮತ್ತು. ಆಲಿಸುವವರ. ಮನಸ್ಸನ್ನು. ನಿರ್ಮಲವಾಗಿಸುವದೆಂದು. ನನ್ನಾಭಿಪ್ರಾಯವೆನಿಸುತ್ತದೆ. Hare. Guru. ರಾಘವೇಂದ್ರ.
ReplyDeleteHari Nama sankeerthana is the ultimate solution which is equal to all sadhanas including thirtha yatras and to get rid of all your problems, however you have to perform atleast your Nithya sandhyavandana
ReplyDelete