Labels

Thursday, 31 October 2019

ಕೇಳಿದ್ಯಾ ಕೌತಕವನ್ನು kelidya koutakavannu

ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ
ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ.
ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1
ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2
ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3

No comments:

Post a Comment