ಈ ಸಮಯಕಲ್ಲದಿನ್ನೆಲ್ಲಿ ಕಾಯೊ
ದೋಷರಹಿತ ವಸುದೇವ ನೀ ಕಾಯೊ ಕೃಷ್ಣ ಪ
ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೊ |
ಎನ್ನ ಸತಿ ಸುತರು ನಿನ್ನವರೆ ಕಾಯೊ ||
ನೀನಲ್ಲದನ್ಯರನು ಕಾಣೆ ಕವಳಿಯ ಕಾಯೊ |
ಮುನ್ನ ಸ್ಥಿರವಾಗಿ ನೀನೆಂಬೆ ಕಾಯೊ 1
ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೊ |
ದುರಿತ ದುಷ್ಕರ್ಮ ಮುಂಚಿಲ್ಲ ಕಾಯೊ ||
ಕರೆಕರೆಯ ಸಂಸಾರಕಷ್ಟು ಕಡಲಿಯ ಕಾಯೊ |
ದುರಿತ ಭವ ಶರಧಿಗೆ ತಾರೆ ಕಾಯೊ 2
ತ್ರಿವಿಧ ಪಾಪಂಗಳಿಗೆ ಪದವು ಉದ್ದಿನ ಕಾಯೊ|
ಭವಸಾಗರದೊಳೀಸೆಂಬೆ ಕಾಯೊ ||
ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೊ |
ನವ ಮುಕ್ತಿ ಪುರಂದರ ವಿಠಲ ನೀ ಬಿಡದೆ ಕಾಯೊ 3
No comments:
Post a Comment