Labels

Thursday, 24 October 2019

ಇರಲೇ ಬಾರದು - ಇಂಥಲ್ಲಿ irale bata do inthalli

ಇರಲೇ ಬಾರದು - ಇಂಥಲ್ಲಿ ಇರಲೇಬಾರದು ಪ.
ಇರಬಾರದಿಂದ ......... ವರೆ ಭಯಂಕರ ಹರಿತಾಪರಿಹರಿಸುವ ಅಪ
ದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ
ಉರಗಗಳು ಸೇರಿಕೊಂಡ ಸದನಗಳಲ್ಲಿ
ಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿ
ಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1
ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿ
ಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿ
ನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿ
ಅವನಿಯೊಳಗರ್ಥ ಪ್ರಾಪ್ತಿ ಇಲ್ಲದಂಥಲ್ಲಿ 2
ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿ
ನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿ
ಶ್ರೀನಾಥ ಶ್ರೀ ಪುರಂದರವಿಠಲ ರೂಪಗಳು
ಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3

No comments:

Post a Comment