ಈಗಲುಪ್ಪವಡಿಸಿದಳು ಇಂದಿರಾದೇವಿ
ಯೋಗರತಿ ನಿದ್ರೆ ತಿಳಿದು ಪ
ಕಡೆಗಣ್ಣ ಕಪ್ಪ ಅಂಗೈಯಿಂದಲೊರಸುತ
ಸಡಲಿದ ತುರುಬ ಬಿಗಿದು ಕಟ್ಟುತ ||
ನಡುವಿನೊಡ್ಯಾಣವ ನಟನೆಯಿಂ ತಿರುವುತ
ಕಡುಕ ಕಂಕಣ ಬಳೆ ಕರದಿ ಘಲ್ಲೆನುತ 1
ಕೂರುಗುರ ಗಾಯವನು ಕೊನೆ ಬೆರಳಲೊತ್ತುತ
ಹಾರದ ತೊಡಕನು ಬಿಚ್ಚಿ ಹಾಕುತ ||
ಜಾರಿದ ಜಾಜಿದಂಡೆ ಸರವನೀಡಾಡುತ
ಮೋರೆಯ ಕಿರುಬೆವರ ಮುಂಜೆರಗಿಲೊರಸುತ2
ರಕ್ಕಸ ಕುಚದೊಳಿರ್ದ ಕಸ್ತುರಿಯನೊರಸುತ
ಚಕ್ಕನೆ ಕನ್ನಡಿಯೊಳು ಮುಖ ನೋಡುತ ||
ಅಕ್ಕರದ ತಾಂಬೂಲ ಸರಸದಿಂದುಗುಳುತ
ಚೊಕ್ಕ ಪುರಂದರ ವಿಠಲ ನೋಡಿ ನಗುತ3
No comments:
Post a Comment