Labels

Monday, 21 October 2019

ಆಡ ಹೋದಲ್ಲಿ ಮಕ್ಕಳು Aada hodalli makkalu

ಆಡ ಹೋದಲ್ಲಿ ಮಕ್ಕಳು-ಎನ್ನನು-|ಆಡಿಕೊಂಬರು ನೋಡಮ್ಮ ಪನೋಡಿ ನೋಡಿ ಇತ್ತ ಮುಖವ |ಮಾಡಿ ಕಣ್ಣ ವಿೂಟುವರಮ್ಮ ಅ.ಪದೇವಕಿ ಪೆತ್ತಳಂತೆ-ವಸು-|ದೇವನೆಂಬವ ಪಿತನಂತೆ ||ಕಾವಲಿನೊಳು ಪುಟ್ಟಿದೆನಂತೆ |ಮಾವ ಕಂಸಗಂಜಿ ಬಂದೆನಂತೆ 1
ನೀನೆನ್ನ ಪೆತ್ತಿಲ್ಲವಂತೆ-ಅಮ್ಮಾ |ನಾನಿನ್ನ ಮಗನಲ್ಲವಂತೆ ||ಧೇನು ಕಾಯುವರಿಲ್ಲವೆಂದು ನೀನು |ಸಾನುರಾಗದಿ ಸಲಹಿದೆಯಂತೆ 2
ವಿಷವು ತುಂಬಿದ ಮೊಲೆಯ-ಕೊಟ್ಟ |ಅಸುರೆಯ ಸಂಹರಿಸಿದೆನಂತೆ ||ಅಸುರನಾದ ಶಕಟನನಾಕ್ಷಣದಲಿ |ಶಿಶುವಾಗಲೆ ಒರೆಸಿದೆನಂತೆ 3
ವತ್ಸಾಸುರನನು ಕೆಡಹಿದೆನಂತೆ |ಕಿಚ್ಚನೆಲ್ಲವನು ನುಂಗಿದೆನಂತೆ ||ಕಚ್ಚಬಂದ ಕಾಳಿಂಗನಾ ಹೆಡೆ-|ಚಚ್ಚಿ ತುಳಿದು ಓಡಿದೆನಂತೆ 4
ಕುಸುಮಗಂಧಿಯರಡುವ |ವಸನ ಕದ್ದು ಓಡಿದೆನಂತೆ ||ಹಸುಗೂಸು ಅಲ್ಲ ಇವ |ಅಸುರ ಮಗನು ಎಂತೆಂಬುವರೆ 5
ಒರಳನೆಳೆತಂದು ಮತ್ತಿ-|ಮರವ ಮುರಿದೋಡಿದೆನಂತೆ ||ತರಳೆಯರ ವಸ್ತ್ರವ ಕದ್ದು |ತರುವನೇರಿದೆನಂತೆ 6
ಪರಮ ಗಾಡಿಕಾರನಿವ |ಪುರಂದರ ವಿಠಲರಾಯ ||ತರುಣಿಯರ ವಂಚಿಸುತ್ತ |ಠಕ್ಕಿಸಿ ಪೋದನೆಂತೆಂಬುವರು7

No comments:

Post a Comment