ಇಂತು ವೇದಾಂತಗಳಲ್ಲಿ ಸುರರು ನಿನ್ನಎಣಿಸುವರಹುದಹುದೈ-ನಿ-ನ್ನಂತವ ತಿಳಿಯಲು ಬ್ರಹ್ಮಾದಿಗಳಿಗೆಅಳವಲ್ಲಹುದಹುದೈ | ಪರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ |ಪಂಡಿತರಾದಾ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ ||ಮಂಡೆನೇವರಿಸಿ ಮೊಲೆಯನಿತ್ತವಳಿಗೆ ಮರಣವು ನಿನ್ನಿಂದೈ |ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ 1
ತೋತ್ತಿನ ಮಗನಿಗೆ ಒಲಿದು ನಿನ್ನಭ ಗಿಣ ತೋರಿದ ಅಹುದಹುದೈ |ಉತ್ತಮರನು ನೀನಡುವಿ ಸೇರಿಸಿದೆ ಉತ್ತಮನಹುದಹುದೈ ||ಅತ್ತೆಯನುಳುಹಿದೆ ಮಾವನ ಮಡುಹಿದೆ ಏತರ ನ್ಯಾಯವಿದೈ |ಮತ್ತನಾಗಿ ನಿನ್ನ ಬೈದ ಪಾತರೆಯ ಮೈಯೊಳಗಿರಿಸಿದೆಯೈ2
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ |ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದ್ಯೆ ||ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ |ಮಂದರಧರ ಶ್ರೀ ಪುರಂದರವಿಠಲ ಮಾಡಿದ್ದೇ ಮರಿಯಾದೈ 3
No comments:
Post a Comment