Labels

Saturday, 19 October 2019

ಅಂದೆ ನಿರ್ಣಯಸಿದರು ande nirnayisidaru

ಅಂದೆ ನಿರ್ಣಯಸಿದರು ಕಾಣೋ |
ಇಂದಿರಾಪತಿ ಪರದೈವತವೆಂಬುದ ಪ
ಅಂದು ಚತುರ್ಮುಖ ನಾರದನಿಗೆ ತನ್ನ |
ತಂದೆ ಶ್ರೀಹರಿ ಪರದೈವವೆಂದು ||
ಸಂದೇಹಗಳ ಪರಿಹರಿಸಿಹ ದ್ವಿತೀಯದ
ಸ್ಕಂಧದೊಳಯ್ದನೆಯ ಅಧ್ಯಾಯದಲಿ 1
ಅಂದು ಕಪಿಲದೇವ ದೇವಹೊಲೆಗೆ ತಾನು |
ಚೆಂದದ ತತ್ತ್ವವನೆಲ್ಲ ಬೋಧಿಸಿದ ||
ಅಂದದಲರ್ಜುನ - ಉದ್ದವರಿಗೆ ಅಂದಾ - |
ನಂದದಿ ಗೀತಾಶಾಸ್ತ್ರವನೊರೆದನೆಂದು 2
ವೇದೈಶ್ಚ ಸರ್ವೋರಹಮೇವ ವೇದ್ಯಃ |
ವೇದವಿಧಾಯಕ ನಾಮದವನು ||
ವೇದಾಕ್ಷರಗಳು ಹರಿನಾಮಗಳೆಂದು |
ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು 3
ರಾಜಸ - ತಾಮಸ ಪೌರಾಣಗಳಿವು |
ರಾಜಸ - ತಾಮಸ ಜೀವರಿಗೆ ||
ರಾಜಸ - ತಾಮಸ ಗತಿಗೋಸ್ಕರ ಮುನಿ - |
ರಾಜ ವ್ಯಾಸನು ಮೋಹಕವೆಂದು ಪೇಳಿದ 4
ಬಿಡು ಪಾಷಂಡಮತದ ದುರ್ಬುದ್ಧಿಯ |
ಬಿಡದೆ ಮಾಡು ವೈಷ್ಣವಸಂಗವ ||
ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |
ಮೃಡಪ್ರಿಯ ಪುರಂದರವಿಠಲನೊಲಿವನೆಂದು 5

No comments:

Post a Comment