Labels

Monday, 21 October 2019

ಆರೇ ರಂಗನ ಆರೇ ಕೃಷ್ಣನ Aare rangana Aare krishnana

ಆರೇ ರಂಗನ ಆರೇ ಕೃಷ್ಣನ
ಆರೇ ರಂಗನ ಕರೆಯಬಂದವರು ಪ
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲಿ ಕರೆಯ ಬಂದವರು 1
ವೇಣುವಿನೋದನ ಪ್ರಾಣಪ್ರಿಯನ |
ಜಾಣೆಯರಸನ ಕರೆಯ ಬಂದವರು 2
ಕರಿರಾಜವರದನ ಪರಮಪುರಷನ |
ಪುರಂದರವಿಠಲನ ಕರೆಯ ಬಂದವರು 3

No comments:

Post a Comment