Labels

Thursday, 31 October 2019

ನೀನೆ ಬಲ್ಲಿದನೋ ರಂಗಾನಿನ್ನ neene ballidano ranga

ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ
ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1
ಖ್ಯಾತಿಯಿಂದ ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2
ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3
ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4
ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5

No comments:

Post a Comment