Labels

Thursday, 31 October 2019

ನಾನೇ ಸಜ್ಜನನಾದಡೆ naane sajjananade

ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ.
ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ 1
ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ 2
ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ 3

No comments:

Post a Comment