ಆಚಾರವಿಲ್ಲದ ನಾಲಿಗೆನೀಚಬುದ್ದಿಯ ಬಿಡು ನಾಲಿಗೆವಿಚಾರವಿಲ್ಲದೆ ಪರರ ದೂಷಿಪುದಕ್ಕೆಚಾಚಿಕೊಡಿರುವಂತ ನಾಲಿಗೆ
ಪ್ರಾರ್ಥಕಾಲದೊಳೆದ್ದು ನಾಲಿಗೆಸಿರಿಪತಿ ಎನ್ನ ಬಾರದೆ ನಾಲಿಗೆಪತಿತ ಪಾವನ ನಮ್ಮ ರತಿಪತಿ ಜನಕನ ಸತತವು ನುಡಿಕಂಡ್ಯ ನಾಲಿಗೆ| 1 |
ಚಾಡಿ ಹೇಳಲಿ ಬೇಡ ನಾಲಿಗೆ ನಿನ್ನಬೇಡಿಕೊಂಬುವೆನು ನಾಲಿಗೆರೂಢಿಗೊಡೆಯ ಶ್ರೀರಾಮನ ನಾಮವಪಾಡುತಲಿರು ಕಂಡ್ಯ ನಾಲಿಗೆ| 2 |
ಹರಿಯ ಸ್ಮರಣಿ ಮಾಡೊ ನಾಲಿಗೆನರಹರಿಯ ಭಜಿಸು ಕಂಡ್ಯ ನಾಲಿಗೆವರದ ಪುರಂದರ ವಿಠಲರಾಯನಚರಣ ಕಮಲವ ನೆನೆ ನಾಲಿಗೆ| 3
No comments:
Post a Comment