Labels

Tuesday, 29 October 2019

ಈ ಪರಿಯ ಸೊಬಗಾವ ದೇವರಲಿ ee pariya sobagava devaralli

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪೀಜನ ಪ್ರಿಯ ಗೋಪಾಲಗಲ್ಲದೆ ಪದೊರೆಯತನದಲಿ ನೋಡೆ ಧರಣಿದೇವಿಯ ರಮಣಸಿರಿಯತನದಲಿ ನೋಡೆ ಶ್ರೀಕಾಂತನು ||ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಗುರುವುತನದಲಿ ನೋಡೆ ಜಗದಾದಿ ಗುರುವು 1
ಪಾವನತ್ವದಿ ನೋಡೆ ಅಮರ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯ ||ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯಆವ ಧೈರ್ಯದಿ ನೋಡೆ ಅಸುರಾಂತಕ2
ಗಗನದಲಿ ಸಂಚರಿಪ ಗರುಡದೇವನೆ ತುರಗಜಗತೀಧರ ಶೇಷ ಪರಿಯಂಕ ಶಯನ ||ನಿಗಮಗೋಚರ ಪುರಂದರ ವಿಠಲಗಲ್ಲದೆಮಿಗಿಲಾದ ದೈವಗಳಿಗೀ ಭಾಗ್ಯವುಂಟೇ *

No comments:

Post a Comment