Labels

Thursday, 31 October 2019

ಒಲ್ಲೆನವ್ವಾ ಲಕುಮಿಯ ನಲ್ಲ ollrnavva lakumiya nalla

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆತನುಹೊರೆಯನೊಲ್ಲೆನವ್ವಾ ಪ
ಹಾರ ಕೊರಳಿಗೆ ಭಾರ ಹುವ್ವಿನಭಾರ ಸೈರಿಸಲಾರೆನೆಮಾರನಯ್ಯನು ಬಾರದಿದ್ದರೆಮಾರನಂಬಿಗೆ ಗುರಿಯ ಮಾಡಿ 1
ಎಲ್ಲ ದೇವರ ವಲ್ಲಭನೆಂದುಒಲಿದ ಮನ ನಿಲ್ಲದೆನಿಲ್ಲದೆ ರಂಗ ಪೋದ ಮಧುರೆಗೆಬಿಲ್ಲ ಹಬ್ಬದ ನೆವನ ಮಾಡಿ 2
ಮಂದಾನಿಲನ ಸಹಿಸಲಾಗದುನೊಂದೆ ಶುಕಪಿಕ ರವಗಳಿಂದಚಂದ್ರಕಿರಣದಿ ಬೆಂದೆ ಇನ್ನೀವೃಂದಾವನವೇಕನನಗಲಿ 3
ಮುನ್ನ ಆಡಿದ ಮಾತ ಮರೆತುಎನ್ನ ಮನದೊಳಗೀಡಾಡಿವನ್ನಜಾಕ್ಷನು ಬಾರ ಪುರದವನ್ನಿತೆಯರನು ಮೆಚ್ಚಿ ಪೋದ 4
ಪೊಂಗೊಳಲ ಧ್ವನಿಗೆ ಸಿಲುಕಿಭಂಗಗೆಟ್ಟೆನಂಗಜನಿಂದಲಿಪೆಂಗಳಿಗುಚಿತವಲ್ಲ ಇದುರಂಗವಿಠಲನ ತೋರದಿದ್ದಡೆ 5

No comments:

Post a Comment