ಆರು ಬಂದವರವ್ವ ಆರವನಲ್ಲದೆ |ಮಾರಜನಕನಾದ ಗೌರಿಯಲ್ಲದೆ ಮತ್ತೆ ಪಹೆಜ್ಜೆಗಳಿಡುತ ಕಾಣಿಸದಂತಿರೆ ಮೃದು-|ಗೆಜ್ಜೆಯ ದನಿಕೇಳಿ ಬರುತಲಿರೆ ||ವಜ್ರಮಾಣಿಕಹಾರ ಹರಿದು ನೆಲಕೆ ಬಿದ್ದು |ಮಜ್ಜಿಗೆಯೊಳಗಿನ ಬೆಣ್ಣೆ ಕಾಣೆನಮ್ಮ 1
ಕೊಂಬು ಕೊಳಲ ತುತ್ತೂರಿ ಊದುತಲಿಕ್ಕುಇಂಬು ಕಸ್ತುರಿ ಪರಿಮಳ ಸೂಸುತ ||ಪೊಂಬಟ್ಟೆ ಚೆಲ್ಲಣ ಸೋಸಿದ ಮೊಸರಿನ |ಕುಂಭ ಒಡೆದು ಕೆಸರಾಗಿದೆಯಮ್ಮ2
ಮಿಂಚಿನಂದದಿ ಹೊಳೆಯುತ ಬದಿಯಲಿದ್ದ |ಸಂಚಿತಾರ್ಥಗಳೆಲ್ಲ ಸೂರಾಡಿದ ||ವಂಚನೆಯಿಲ್ಲದೆ ಭಕ್ತರ ಸಲುಹಿದ |ಸಂಚುಕಾರ ಪುರಂದರವಿಠಲನಲ್ಲದೆ 3
No comments:
Post a Comment