ಆದದ್ದೆಲ್ಲ ಒಳತೇ ಆಯಿತು ನಮ್ಮ |
ಶ್ರೀಧರನ ಸೇವೆಯ ಮಾಡಲು | ----- ಪ
ಸಾಧನ ಸಂಪತ್ತಾಯಿತು ---------- ಅ.ಪ
ದಂಡಿಗೆ ಬೆತ್ತ ಹಿಡಿಯುವುದಕ್ಕೆ |
ಮಂಡೆ ತಗ್ಗಿಸಿ ನಾಚುತಲಿದ್ದೆ ||
ಹೆಂಡತಿ ಸಂತತಿ ಸಾವಿರವಾಗಲಿ |
ದಂಡಿಗೆ ಬೆತ್ತ ಹಿಡಿಸಿದಳಯ್ಯ 1
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ |
ಭೂಪತಿಯಂತೆ ನಾಚುತಲಿದ್ದೆ ||
ಆ ಪತ್ನಿಯು ತಾ ಪ್ರೀತಿಯಿಂದಲಿ |
ಗೋಪಾಳ ಬುಟ್ಟಿಯ ಹಿಡಿಸಿದಳಯ್ಯ 2
ತುಳಸಿಮಾಲೆಯ ಹಾಕುವುದಕ್ಕೆ |
ಅಲಸಿಕೊಂಡು ನಡೆಯುತಲಿದ್ದೆ ||
ಜಲಜಾಕ್ಷಿಯು ಶ್ರೀ ಪುರಂದರವಿಠಲ |ತುಳಸಿ | ಮಾಲೆಯ ಹಾಕಿಸಿದಳು 3
No comments:
Post a Comment