ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |
ಹೊಂತಕಾರಿ ಬಲವಂತರಿಗಧಿಕನು ಪ
ತರಳನಂತಿಪ್ಪನು ತರಳೆಯರೊಡನಾಡುವ |
ಕಿರುಬೆರಳುಗುರಲಿ ಗಿರಿಯನೆತ್ತಿದವ 1
ಕಾಳಿಯ ಸರ್ಪನ ಕಾಲಲ್ಲಿ ತುಳಿದವ |
ಪಲಾಯನ ಮಾಡಿ ಕಾಲಯವನನ ಸುಟ್ಟ 2
ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |
ರಚ್ಚೆ ಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ 3
ಬಾಯಿ ತೆರೆದನಲ್ಲೆ ನೀನಂಜುವಂದದಿ |
ಆಯಮಳಾರ್ಜುನರಾಯಾಸ ಬಿಡಿಸಿದ 4
ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |
ಪುಟ್ಟ ಪುರಂದರವಿಠಲರಾಯನು 5
No comments:
Post a Comment