Labels

Saturday, 19 October 2019

ಅಕ್ಕಟಕ್ಕಟೆಂನಗಂಡ akkatekkatemna

ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |
ರಕ್ಕಸಾಂತಕನ ಭಜಿಸಿ ರಚ್ಚೆ ಗೋಡಾಯಿತೆಂನ ಬದುಕು |
ಅಕ್ಕಟಕ್ಕಟರೆಂನ ಗಂಡ ಪ.
ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |
ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡ
ಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |
ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ 1
ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವ
ಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವು
ಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮ
ಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯು
ಬಿದ್ದಂತಾಯಿತವ್ವ | ಅಕ್ಕಟ | 2
ಕಾಲಿಝಂಣ ಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದು
ಕೊಟ್ಟರೆ ದೇವಸುಖವ ಕೊಡುವನೂ |
ವೀರವಿಷ್ಣುವಿಗೆ ಕೊಟ್ಟು ತ್ರಾಹಿ ತ್ರಾಹಿ ಎನ್ನಲಾಗಿ
ಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿ ಹೋಯಿತವ್ವ | ಅಕ್ಕಟ 3
ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿ
ಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊ
ಅರ್ಥಿಕಚ್ಚೆಯಂನು ಬಿಟ್ಟು ನಿತ್ಯ ಕಚ್ಚೆ ಉಡೆಯಲಾಗಿ
ವಿತ್ತ ಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ 4
ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿ
ಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನ
ಭಜಿಸಲಾಗಿ | ತುತ್ತ ಗೊಂಬುದೊಂದು ಕೂಳು ಬೆಲ್ಲದಹಾಗೆ ಆಯಿತವ್ವ 5

No comments:

Post a Comment