ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ
ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ.
ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ 1
ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ2
ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ e್ಞÁನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ 3
ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ4
ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ5
No comments:
Post a Comment